ಮಣಿಪಾಲ:ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ
ಮಣಿಪಾಲ( ಉಡುಪಿ ಟೈಮ್ಸ್ ವರದಿ): ಇಲ್ಲಿನ ಅನಂತ ನಗರದ ಸೋನಿ ಕ್ಲಿನಿಕ್ ನ ಹಿಂಬದಿಯಲ್ಲಿರುವ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .
ಅಡುಗೆ ಅನಿಲ ಭರಿತ ಸಿಲಿಂಡರ್ ನ್ನು ಬಳಸುವ ಸಮಯದಲ್ಲಿ ಅಡುಗೆ ಅನಿಲ ಸೋರಿಕೆ ಉಂಟಾಗಿದ್ದು ಮನೆಯವರು ಒದ್ದೆ ಬಟ್ಟೆಗಳನ್ನು ಇರಿಸಿ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ. ಅದು ಅಸಾಧ್ಯವಾಗಿ ಬೆಂಕಿ ಹೊತ್ತಿಕೊಂಡಿತ್ತು ಅಪಾಯ ಅರಿತ ಮನೆಯವರು ಮನೆಯಿಂದ ಹೊರಗೆ ಧಾವಿಸಿ ಪ್ರಾಣ ಉಳಿಸಿಕೊಂಡರು. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಅಗ್ನಿ ಶಾಮಕ ದಳದವರಿಗೆ ವಿಷಯವನ್ನು ತಿಳಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅಪಾಯವನ್ನು ತಡೆಗಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.