ಉಡುಪಿ: ಪೌರ ಕಾರ್ಮಿಕರಿಗೆ ಸರಿಯಾದ ಕೆಲಸ ಹಂಚಲಾಗುವುದು: ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್

ಉಡುಪಿ ಜೂ.23( ಉಡುಪಿ ಟೈಮ್ಸ್ ವರದಿ): ಉಡುಪಿ ನಗರ ಸಭೆಯ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರ ಕೆಲಸದ ಕುರಿತು ಚರ್ಚೆ ನಡೆಯಿತು. ಪೌರ ಕಾರ್ಮಿಕರ ಕೆಲಸ ಮಾಡುವ ಸಮಯ ಕಡಿಮೆ ಇದ್ದು. ಇರುವಷ್ಟು ಸಮಯವನ್ನು ಮೊಬೈಲ್ ನೋಡುವುದು ಹಾಗೂ ಕಾಲಹರಣ ಮಾಡುತ್ತಿದ್ದಾರೆ ಮತ್ತು ಸರಿಯಾದ ಕಾರಣಗಳನ್ನು ನೀಡದೆ ಏಕಾಏಕಿ 182 ಮಂದಿಯಲ್ಲಿ 18 ರಿಂದ 20 ಜನ ಕೆಲಸಕ್ಕೆ ರಜೆ ಪಡೆಯುತ್ತಿರುವುದರ ಕುರಿತು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಹೊರಗೆ ಕೆಲಸ ಮಾಡಬೇಕಿದ್ದ ಬಹುತೇಕ ಮಂದಿ ನಗರ ಸಭೆ ಒಳಗೆ ಕೆಲಸ ಮಾಡುತ್ತಿದ್ದಾರೆ ಸರ್ಕಾರದಿಂದ ಉತ್ತಮ ವೇತನ ಮತ್ತು ಸೌಲಭ್ಯ ನೀಡಿದರು ಈ ರೀತಿ ಮಾಡುವುದು ಸರಿಯಲ್ಲ, ಪ್ರತಿ ವಾರ್ಡ್ ಗೆ ದಿನನಿತ್ಯ 2 ರಿಂದ 3 ಜನರನ್ನು ನಿಯೋಜಿಸಿದ್ದಲ್ಲಿ ನಗರ ಸಭಾ ಸದಸ್ಯರೇ ಮುಂದೆ ನಿಂತು ಕೆಲಸ ನಿರ್ವಹಿಸುವುದಾಗಿ ಸಭೆಯಲ್ಲಿ ಚರ್ಚಿಸಲಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಪೌರ ಕಾರ್ಮಿಕರಿಗೆ ಸರಿಯಾದ ಕೆಲಸ ಹಂಚುವುದಾಗಿ ಹಾಗೂ ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವಾಗ ಇಲ್ಲಿನವರಿಗೆ ಮೊದಲ ಆಧ್ಯತೆ ನೀಡುವುದಾಗಿ ತಿಳಿಸಿದರು. ಇದೇ ವೇಳೆ ಶಾಸಕ ರಘುಪತಿ ಭಟ್ ಅವರು ಮಾತನಾಡಿ, ಪೌರ ಕಾರ್ಮಿಕರಿಗೆ ಪ್ರಸ್ತುತ 20 ರೂ ಮೌಲ್ಯದ ತಿಂಡಿ ನೀಡಲಾಗುತ್ತಿದೆ. ಇದನ್ನು ಸರಕಾರ ಭರಿಸುತ್ತದೆ. ಮುಂದಿನ ದಿನಗಳಲ್ಲಿ ಸರಕಾರದ 20 ರೂ ಜೊತೆಗೆ ನಗರ ಸಭೆ ಫಂಡ್ ನಿಂದ 20 ರೂ ಸೇರಿಸಿ 40 ರೂ ಪ್ರಮಾಣದಲ್ಲಿ ಪೌರ ಕಾರ್ಮಿಕರಿಗೆ ಉತ್ತಮ ಆಹಾರ ನೀಡುವಂತೆ ಜಿಲ್ಲಾಧಿಕಾರಿ ಗೆ ಮನವಿ ಮಾಡುವಂತೆ ನಗರ ಸಭಾ ಅಧ್ಯಕ್ಷರಿಗೆ ಸೂಚನೆ ನೀಡಿದರು.ಈ ವಿಚಾರವಾಗಿ ನಗರ ಸಭೆಯ ಸದಸ್ಯರಾದ ಕೃಷ್ಣ ರಾವ್ ಕೊಡಂಚ ಅವರು ಅನೇಕ ವಿಚಾರಗಳನ್ನು ಮಂಡಿಸಿದರು.

ಇನ್ನೂ ಮೆಸ್ಕಾಂ ಹಾಗೂ ನಗರ ಸಭೆಯ ಸಮನ್ವತೆಯ ಕೊರತೆಯಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ, ಮೆಸ್ಕಾಂ ಕಾರ್ಯಕ್ಷಮತೆ ಉತ್ತಮವಾಗಿದೆ ಆದರೆ ಕೆಲವೊಂದು ಸಣ್ಣ ಪುಟ್ಟ ಕೊರತೆಗಳಿಗೆ ಸ್ಪಂದನೆ ನೀಡದೆ ಇರುವುದು ಬೇಸರ ಎಂದೂ ಸದಸ್ಯರಾದ ಅಮೃತ ಕೃಷ್ಣ ಮೂರ್ತಿ, ರಮೇಶ್ ಕಾಂಚನ್ ಹಾಗೂ ಕೃಷ್ಣ ರಾವ್ ಕೊಡಂಚ ಈ ವಿಷಯವನ್ನು ಪ್ರಸ್ತಾಪಿಸಿದರು. ಈ ಕುರಿತು ಉತ್ತರಿಸಿದ ಅರ್ ಎಫ್ ಒ ಗುರುರಾಜ್ ಮರಗಳ ಕೊಂಬೆಗಳನ್ನು ಕಡಿಯಲು ಅರಣ್ಯ ಇಲಾಖೆಯ ಅಗತ್ಯ ಇಲ್ಲ ಆದರೆ ಮರವನ್ನು ಕಡಿಯಬೇಕಾದರೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ನಗರದ ಒಳಗೆ ಇರುವ ಅಪಾಯಕಾರಿ ಮರಗಳನ್ನು ಪಟ್ಟಿ ಮಾಡಿ ಕೊಡಿ ಎಂದು ತಿಳಿಸಿದರು. ಜಿಲ್ಲೆಯಲ್ಲಿರುವ ಅಪಾಯಕಾರಿ ಮರಗಳನ್ನು ಕಡಿಯುವ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿರುಸಿನ ಚರ್ಚೆ ನಡೆಯಿತು.

ಇದೇ ವೇಳೆ ವಿದೇಶಗಳಲ್ಲಿ ದೊಡ್ಡ ದೊಡ್ಡ ಮರಗಳನ್ನು ಉಳಿಸಿಕೊಂಡು ರಸ್ತೆಗಳನ್ನು ನಿರ್ಮಿಸುತ್ತಾರೆ. ಅದೇ ರೀತಿ ನಾವು ಕೂಡ ಮರವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ನಗರ ಸಭಾ ಸದಸ್ಯರಾದ, ಬಹುಶ: ಮರಗಳಿಗೆ ಹಾಗೂ ನಾಯಿಗಳಿಗೆ ಮತ ಹಾಕುವ ಹಕ್ಕಿದ್ದಲ್ಲಿ ಎಲ್ಲವೂ ಉಳಿಯುತ್ತಿತ್ತು ಹಾಗಾಗಿ ಮರಗಳಿಗೆ ಕಟ್ಟೆ ಕಟ್ಟಿ ಉಳಿಸುವ ಪ್ರಯತ್ನ ಮಾಡುವ ಎಂದೂ ಯೋಗೀಶ್ ಸಾಲ್ಯಾನ್ ಸಲಹೆ ನೀಡಿದರು.

ಇದರೊಂದಿಗೆ ಬೀದಿ ನಾಯಿಗಳ ಸಮಸ್ಯೆ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆ ನಡೆಯಿತು ನಗರ ಸಭೆಯಿಂದನೇ ಮರ ಕಡಿಯುವ ಬಗ್ಗೆ ಪತ್ರ ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದೆ ತೊಂದರೆ ಆಗುತ್ತದೆ ಎಂದು ನಗರ ಸಭೆ ಅಧ್ಯಕ್ಷೆ ಕಳವಳ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಸ್ಮಿ ಮಂಜುನಾಥ್, ಪೌರಯುಕ್ತ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!