ಕೋಟ: ಅನಾರೋಗ್ಯ ಪೀಡಿತ ಯುವಕನಿಗೆ ಧನ ಸಹಾಯ
ಕೋಟ(ಉಡುಪಿ ಟೈಮ್ಸ್ ವರದಿ): ಇಲ್ಲಿನ ಮೂಡುಗಿಳಿಯಾರು ಪರಿಸರದ ಅನಾರೋಗ್ಯ(ನಿರೋಲಾಜಿ) ಪೀಡಿತ ಶಬರೀಶ ಆಚಾರ್ಯ ಇವರ ಚಿಕಿತ್ಸೆಗೆ ಸ್ಥಳೀಯ ಯುವಕ ಮಂಡಲಗಳಾದ ಗಿಳಿಯಾರು ಯುವಕ ಮಂಡಲ,ನಿಸರ್ಗ ಫ್ರೆಂಡ್ಸ್ ಗಿಳಿಯಾರು, ಮಹಿಳಾ ಸಂಘಟನೆ, ದೊಡ್ಡಬಸವೇಶ್ಚರ ಸೇವಾ ಸಮಿತಿಯರೊಡಗೂಡಿ ಸುಮಾರು 75 ಸಾವಿರ ರೂ ಹಣವನ್ನು ಮಂಗಳವಾರ ಅವರ ಸ್ವಗೃಹಕ್ಕೆ ತೆರಳಿ ಹಸ್ತಾಂತರಿಸಲಾಯಿತು.
ಬಡ ಕುಟುಂಬದ ಈತನ ಚಿಕಿತ್ಸೆಗೆ ಹಣಬರಿಸಲಾಗದೆ ಕಳೆದ ಎಂಟು ವರ್ಷಗಳಿಂದ ಅನಾರೋಗ್ಯ ಪೀಡಿತನಾಗಿದ್ದು ತನ್ನ ಚಿಕಿತ್ಸಾವೆಚ್ಚಕ್ಕೆ ಸ್ಥಳೀಯ ಸಂಘಸಂಸ್ಥೆಗಳ ಮೊರೆಹೋಗಬೇಕಾದ ಸ್ಥಿತಿ ಸೃಷ್ಠಿಯಾಗಿತ್ತು.ಇದರೊಂದಿಗೆ ಸುಮಾರು 2ಲಕ್ಷ ರೂ ಅಂದಾಜು ಚಿಕಿತ್ಸಾ ವೆಚ್ಚದಲ್ಲಿ ಸ್ಥಳೀಯ ಸಂಘಸಂಸ್ಥೆಗಳ ಆರ್ಥಿಕ ಸಹಕಾರದಿಂದ 1ಲಕ್ಷದ 20 ಸಾವಿರ ರೂ ಕ್ರೂಡಿಕರಿಸಲಾಗಿದ್ದು ಇನ್ನುಳಿದ ಆರ್ಥಿಕ ಸಹಕಾರಕ್ಕಾಗಿ ಉದ್ಯಮಿ ಹಾಗೂ ಸಂಘಸಂಸ್ಥೆಗಳತ್ತ ಸ್ಥಳೀಯ ಯುವಕ ಮಂಡಲಗಳು ಮನವಿ ಮಾಡಿದ್ದಾರೆ .