ಉಡುಪಿ : ಸರಕಾರಿ ವಕೀಲರಾಗಿ ಸಂತೋಷ್ ಹೆಬ್ಬಾರ್ ನೇಮಕ
ಉಡುಪಿ (ಉಡುಪಿ ಟೈಮ್ಸ್ ವರದಿ) : ಜಿಲ್ಲಾ ಸರಕಾರಿ ವಕೀಲರ ಹುದ್ದೆ ನಿರ್ವಹಿಸುತ್ತಿದ್ದ ಶಶಿಧರ್ ಬಿನ್ ಪುರುಷೋತ್ತಮ ಕೋಟ್ಯಾನ್ ಅವರ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಉಡುಪಿಯ ನ್ಯಾಯವಾದಿ ಐರೋಡಿಯ ಸಂತೋಷ್ ಎ ಹೆಬ್ಬಾರ್ ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ 3 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಸರಕಾರಿ ವಕೀಲರಾಗಿ ನೇಮಿಸಲಾಗಿದೆ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಜಿ ಮಂಜುಳಾ ತಿಳಿಸಿದ್ದಾರೆ.