ಕೋಟ: ಯೋಗ ದಿನಾಚರಣೆ
ಕೋಟ(ಉಡುಪಿ ಟೈಮ್ಸ್ ವರದಿ): ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಸೋಮವಾರ ಸಾಲಿಗ್ರಾಮದ ಚೇಂಪಿ ಸುಕೃತಿಂದ್ರ ಸಭಾ ಭವನ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಯೋಗ ಗುರು ವಿದ್ವಾನ ವಿಜಯ ಮಂಜರ್ ಪಾಂಡೇಶ್ವರ ಅವರ ಮಾರ್ಗ ದರ್ಶನದಲ್ಲಿ ಯೋಗಾಭ್ಯಾಸ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ರಾಜ್ಯ ಹಿಂದೂಳಿದ ಮೋರ್ಚದ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ,ಕುಂದಾಪುರ ಹಿಂದೂಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸತೀಶ್ ಬಾರಿಕರೆ,ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜಿತ್ ಬಾರಿಕರೆ , ಸಾಲಿಗ್ರಾಮ ಪಟ್ಟಣ ಪಂಚಾಯತ ಸದಸ್ಯ ಸಂಜು ದೇವಾಡಿಗ, ಕೋಟ ಗ್ರಾಮ ಪಂಚಾಯತ ಸದಸ್ಯ ಸಂತೋಷ ಪ್ರಭು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶಂಕರ್ ಕುಲಾಲ್ ಐರೋಡಿ,ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ, ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ ಹಾಗೂ ಬಿಜೆಪಿ ಕಾರ್ಯಕರ್ತರು,ಇತರ ಮುಖಂಡರುಗಳು ಭಾಗವಹಿಸಿದ್ದರು.