ಬ್ರಹ್ಮಾವರ: ವರ್ಗಾವಣೆಗೊಂಡ ತಹಶೀಲ್ದಾರರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಬ್ರಹ್ಮಾವರ (ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರ ತಾಲೂಕು ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಕಿರಣ್ ಗೋರಯ್ಯ ಅವರು ಬ್ರಹ್ಮಾವರದಿಂದ ವರ್ಗಾವಣೆಗೊಂಡಿದ್ದು ಅವರ ಸೇವೆಯನ್ನು ಸ್ಮರಿಸಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಜೂ.21 ರಂದು ಸನ್ಮಾನಿಸಿ ಗೌರವಿಸಿತು.
ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಮಾತನಾಡಿ, ಕಿರಣ್ ಗೋರಯ್ಯ ಅವರು ಅತ್ಯಂತ ಜನಸ್ನೇಹಿಯಾಗಿ ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಪತ್ರಕರ್ತರ ಜತೆ ಆತ್ಮೀಯ ಸಂಬಂಧ ಇರಿಸಿಕೊಂಡಿದ್ದರು. ನಮ್ಮ ಸಂಘಕ್ಕೆ ಬ್ರಹ್ಮಾವರದಲ್ಲಿ ನಿವೇಶನವೊಂದನ್ನು ಕಾಯ್ದಿಸುವ ಸಲುವಾಗಿ ಸ್ಥಳಗುರುತಿಸುವಿಕೆ, ಕಡತಗಳ ರವಾನೆಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬ್ರಹ್ಮಾವರ ಪತ್ರಕರ್ತರ ಸಂಘದ ಇತಿಹಾಸದಲ್ಲೇ ವರ್ಗಾವಣೆಗೊಂಡ ಅಽಕಾರಿಯನ್ನು ಗೌರವಿಸುತ್ತಿರುವುದು ಇದೇ ಪ್ರಥಮವಾಗಿದ್ದು ಇವರ ಕಾರ್ಯಧಕ್ಷತೆಗೆ ಇದು ಸೂಚಿಸುತ್ತದೆ ಎಂದರು.
ಈ ಸಂದರ್ಭ ನೂತನವಾಗಿ ಅಽಕಾರವಹಿಸಿಕೊಂಡ ತಹಶೀಲ್ದಾರ್ ರಾಜಶೇಖರ್‌ಮೂರ್ತಿ ಅವರಿಗೆ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಗೌರವ ಸ್ವೀಕರಿಸಿದ ಕಿರಣ್ ಗೌರಯ್ಯ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪತ್ರಕರ್ತರ ಸಂಘದ ಖಜಾಂಚಿ ಮೋಹನ್ ಉಡುಪ, ಪದಾಽಕಾರಿಗಳಾದ ಚಂದ್ರಶೇಖರ್ ಬೀಜಾಡಿ, ಪ್ರವೀಣ್ ಮುದ್ದೂರು, ಬಂಡೀಮಠ ಶಿವರಾಮ್ ಆಚಾರ್ಯ, ರವೀಂದ್ರ ಕೋಟ, ಪ್ರವೀಣ್ ಬ್ರಹ್ಮಾವರ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗಣೇಶ್ ಸಾಬ್ರಕಟ್ಟೆ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಪ್ರಭಾರ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!