ಗಂಗೊಳ್ಳಿ : ವರದಕ್ಷಿಣೆ ಕಿರುಕುಳ ಪತ್ನಿಯಿಂದ ಪತಿಯ ಮೇಲೆ ದೂರು ದಾಖಲು

ಗಂಗೊಳ್ಳಿ (ಉಡುಪಿ ಟೈಮ್ಸ್ ವರದಿ): ವರದಕ್ಷಿಣೆ ಕಿರುಕುಳ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಕಾವ್ಯ ರಾಜರಾಮ್‌ ಎಂಬವರು ದೂರು ನೀಡಿದ್ದು, ಅದರಂತೆ, ಇವರು 2019 ರ ಅ. 27 ರಂದು ಬಿ.ಧನಂಜಯ ನಾಯ್ಕ್ ಜೊತೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಒಂದು ವರ್ಷದ ನಂತರ ಗಂಡನು ಕಾವ್ಯ ಅವರಿಗೆ ಸಣ್ಣಪುಟ್ಟ ವಿಚಾರದಲ್ಲಿ ಮಾನಸಿಕ ಹಿಂಸೆ ಕಿರುಕುಳ ಹಾಗೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ 2021 ರ ಎ.5 ರಂದು ಕಾವ್ಯ ಹಾಗೂ ಅವರ ಮಗುವನ್ನು ಮನೆಯಿಂದ ಹೊರಹಾಕಿದ್ದನು.
ಅಲ್ಲದೆ ಕಾವ್ಯ ಅವರ ತಂದೆಯ ಆಸ್ತಿಯಲ್ಲಿ ಪಾಲನ್ನು ತೆಗೆದುಕೊಂಡು ತನ್ನ ಹೆಸರಿಗೆ ಮಾಡಿಕೊಡುವಂತೆಯೂ ವರದಕ್ಷಿಣೆಗಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿರುವುದಾಗಿ, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!