ಹೆಬ್ರಿ: ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ 7 ಮಂದಿ ಬಂಧನ
ಹೆಬ್ರಿ ( ಉಡುಪಿ ಟೈಮ್ಸ್ ವರದಿ): ನಗರದ ಕುಚ್ಚೂರು ಗ್ರಾಮದ ಮಾತ್ಕಲ್ಲು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ .
ವಸಂತ ಪೂಜಾರಿ (37) , ಕೃಷ್ಣ ಶೆಟ್ಟಿ (52) , ಡೆನ್ನಿಸ್ (56), ರಾಘವೇಂದ್ರ (33), ವಿಕಾಶ ಶೆಟ್ಟಿ (33), ಆಶೋಕ್ (38) , ರವಿ (27) ಬಂಧಿತ ಆರೋಪಿಗಳು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಠಾಣಾ ಪೊಲೀಸರು ಸ್ಥಳಕ್ಕೆ ದಾಳಿಮಾಡಿ ಪರಿಶೀಲನೆ ನಡೆಸಿದಾಗ ಕೆಲವರು ಸೇರಿ ಇಸ್ಪೀಟು ಜುಗಾರಿ ಆಡುತ್ತಿದ್ದದ್ದು ಕಂಡು ಬಂದಿದೆ. ಈ ವೇಳೆ 7 ಮಂದಿಯನ್ನು ಬಂಧಿಸಿ, ಸ್ಥಳದಲ್ಲಿ ದಲ್ಲಿ ಇದ್ದ ಅಟಕ್ಕೆ ಉಪಯೋಗಿಸಿದ 3,150 ರೂ. ನಗದು, 52 ಇಸ್ಪೀಟ್ ಎಲೆಗಳು, ಎರಡು ಪ್ಲಾಸ್ಟಿಕ್ ಚೀಲ ಮತ್ತು 1 ಕೆಂಪು ಬಣ್ಣದ ಬಟ್ಟೆ ಯನ್ನು ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.