ರಿಲಯನ್ಸ್ ಫೈನಾನ್ಸ್ ನಿಂದ ಕರ್ನಾಟಕ ಬ್ಯಾಂಕ್’ಗೆ 160 ಕೋಟಿ ರೂ. ವಂಚನೆ

ಬೆಂಗಳೂರು( ಉಡುಪಿ ಟೈಮ್ಸ್ ವರದಿ): ಕರ್ನಾಟಕ ಬ್ಯಾಂಕ್ ಗೆ ರಿಲಯನ್ಸ್ ಹೋಂ ಫೈನಾನ್ಸ್ ಮತ್ತು ಕಮರ್ಷಿಯಲ್ ಫೈನಾನ್ಸ್ 160 ಕೋಟಿ ರೂ. ವಂಚನೆ ಮಾಡಿರುವ ಸುದ್ದಿಯೊಂದು ವರದಿಯಾಗಿದೆ.

ದೇಶದ ಖ್ಯಾತ ಉದ್ಯಮ ಕಂಪನಿಗಳಾದ ರಿಲಯನ್ಸ್ ಹೋಂ ಫೈನಾನ್ಸ್ ಮತ್ತು ಕಮರ್ಷಿಯಲ್ ಫೈನಾನ್ಸ್ ಕರ್ನಾಟಕ ಬ್ಯಾಂಕ್ ಗೆ 160 ಕೋಟಿ ರೂ. ಗೂ ಹೆಚ್ಚು ವಂಚನೆ ಮಾಡಿರುವುದು ದೃಢಪಟ್ಟಿದ್ದು, ರಿಲಯನ್ಸ್ ಕಂಪನಿಯ ಈ ಎರಡೂ ಬಾಬ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ ಎಂದು ಘೋಷಿಸಿರುವುದಾಗಿ ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ.

ವಂಚನೆಗೆ ಒಳಗಾಗಿರುವ ಬಗ್ಗೆ ಸ್ವತಃ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದ್ದು, ರಿಲಯನ್ಸ್ ಕಂಪನಿಯ ಈ ಎರಡೂ ಬಾಬ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ (non performing assets -NPA) ಎಂದು ಘೋಷಿಸಲಾಗಿದೆ ಎಂದು ತಿಳಿಸಿದೆ.

ನಾನಾ ಬ್ಯಾಂಕಿಂಗ್ ಆರ್ಥಿಕ ಒಪ್ಪಂದಗಳಡಿ ರಿಲಯನ್ಸ್ ಹೋಂ ಫೈನಾನ್ಸ್ ಸಂಸ್ಥೆಯ ಜೊತೆ ಶೇ. 0.39 ಷೇರು ಪ್ರಮಾಣ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಶೇ. 1.98 ರಷ್ಟು ಷೇರು ಪಾಲನ್ನು ಕರ್ನಾಟಕ ಬ್ಯಾಂಕ್ ಹೊಂದಿದೆ. ಇವೆರಡರ ಬಾಬ್ತಿ ನಲ್ಲಿ 160 ಕೋಟಿ ರೂ ಸಾಲ ವಂಚನೆ ನಡೆದಿದೆ. ರಿಲಯನ್ಸ್ ಹೋಂ ಫೈನಾನ್ಸ್ ವತಿಯಿಂದ 21.94 ಕೋಟಿ ರೂ ಸಾಲ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ 138.41 ಕೋಟಿ ರೂ ಸಾಲ ವಾಪಸಾಗಬೇಕಿದೆ ಎಂದು ಸೆಬಿಗೆ ಸಲ್ಲಿಸಿರುವ ವರದಿಯಲ್ಲಿ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ.

ಇನ್ನು, 2015ರಿಂದ ರಿಲಯನ್ಸ್ ಹೋಂ ಫೈನಾನ್ಸ್ (Reliance Home Finance) ಮತ್ತು 2014ರಿಂದ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ (Reliance Commercial Finance) ಕಂಪನಿಗಳೆರಡೂ ಕರ್ನಾಟಕ ಬ್ಯಾಂಕ್ ಜೊತೆ ವ್ಯವಹರಿಸುತ್ತಿದೆ. ಇದೀಗ ವಂಚನೆ ಪ್ರಕರಣಗಳು ನಡೆದಿವೆ ಎಂದು ಕರ್ನಾಟಕ ಮೂಲದ ಖಾಸಗಿ ಬ್ಯಾಂಕ್ ಕರ್ನಾಟಕ ಬ್ಯಾಂಕ್ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!