ಗಂಗೊಳ್ಳಿ: ಮದ್ಯವಿಲ್ಲವೆಂದ ಬಾರ್ ಮಾಲಿಕನಿಗೆ ತಂಡದಿಂದ ಜೀವ ಬೆದರಿಕೆ
ಗಂಗೊಳ್ಳಿ(ಉಡುಪಿ ಟೈಮ್ಸ್ ವರದಿ): ಲಾಕ್ ಡೌನ್ ಇರುವುದರಿಂದ ರಾತ್ರಿ ವೇಳೆ ಮದ್ಯ ನೀಡಲು ಸಾಧ್ಯವಿಲ್ಲ ಎಂದಿದಕ್ಕೆ ಬಾರ್ ಮಾಲೀಕನಿಗೆ ತಂಡವೊಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಘಟನೆ ತ್ರಾಸಿ ಬಳಿ ನಡೆದಿದೆ.
ಈ ಬಗ್ಗೆ ರಾಹುಲ್ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ರಾಹುಲ್ ಪೂಜಾರಿ ಅವರು ತ್ರಾಸಿಯಲ್ಲಿ ಬಾರ್ ವೊಂದನ್ನು ನಡೆಸುತ್ತಿದ್ದು, ಜೂ.19 ರಂದು ರಾತ್ರಿ 10.30 ರ ಸುಮಾರಿಗೆ ಶ್ರೀಕಾಂತ ಎಂಬಾತ ರಾಹುಲ್ ಪೂಜಾರಿ ಅವರಿಗೆ ಕರೆ ಮಾಡಿ ಕುಡಿಯಲು ಬಿಯರ್ ಬೇಕು ಎಂದು ಕೇಳಿದ್ದು ಅದಕ್ಕೆ ಲಾಕ್‌ಡೌನ್ ಇರುವ ಕಾರಣ ಬಾರ್ ಬಂದ್ ಇದೆ, ಹಾಗಾಗಿ ಇಲ್ಲ ಎಂದು ತಿಳಿಸಿದ್ದರು.
ಈ ವೇಳೆ ಶ್ರೀಕಾಂತ ರಾಹುಲ್ ಅವರಿಗೆ ಅವಾಚ್ಯ ವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಇದರಿಂದ ಹೆದರಿದ ರಾಹುಲ್ ಪೂಜಾರಿ ಅವರು, ಕಾರಿನಲ್ಲಿ ಪೊಲೀಸ್ ಠಾಣೆಗೆ ಬರುತ್ತಿದ್ದಾಗ ರಾತ್ರಿ ವೇಳೆ ತ್ರಾಸಿಯ ಬಳಿ ತಲುಪುವಾಗ ಶ್ರೀಕಾಂತ, ದೀಪಕ್, ಸಂತೋಷಪೂಜಾರಿ, ಸುರೇಶಪೂಜಾರಿ, ಪ್ರಸಾದ ಪೂಜಾರಿ ಎಂಬುವವರು ಕಾರನ್ನು ಅಡ್ಡಗಟ್ಟಿ, ಅವಾಚ್ಛ್ಯ ಶಬ್ದದಿಂದ ಬೈದು, ಕುಡಿಯಲು ಬಿಯರ್ ಕೊಡು ಇಲ್ಲವಾದಲ್ಲಿ ಕೊಲ್ಲುವುದಾಗಿ ಹೇಳಿ ಜೀವ ಬೆದರಿಕೆಹಾಕಿ, ಹಲ್ಲೆ ಮಾಡಲು ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.