ಕೋವಿಡ್ ಮುಕ್ತ ಸಮಾಜದ ನಿರ್ಮಾಣದ ಗುರಿ: ಫಾ. ಎಂ. ಸಿ ಮಥಾಯಿ
ಬ್ರಹ್ಮಾವರ (ಉಡುಪಿ ಟೈಮ್ಸ್ ವರದಿ): ಸೈಂಟ್ ಮೇರಿಸ್ ಓರ್ಥೂಡೆಕ್ಸ್ ಸಿರಿಯನ್ ಕೆಥ್ರೇಡೆಲ ಬ್ರಹ್ಮಾವರ್ ಹಾಗೂ ಸಿಸ್ಟರ್ ಚರ್ಚಗಳು, ಆರ್ಥೋಡೆಕ್ಸ್ ಸಿರಿಯನ್ ಕೊವಿಡ್ ಟಾಸ್ಕ್ ಫೋರ್ಸ್ ಸಮಿತಿ ಇವರ ನೇತೃತ್ವದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಜೂನ್ 17 ರಂದು ಎಸ್.ಎಂ.ಎಸ್. ಸಮುದಾಯ ಭವನದಲ್ಲಿ ಸುಮಾರು 330ಕ್ಕೂ ಹೆಚ್ಚು ಸದಸ್ಯರಿಗೆ ಕೋವಿಷಿಲ್ಡ್ ಲಸಿಕೆ ನೀಡಲಾಯಿತು. ಫಾ. ಎಂ. ಸಿ ಮಥಾಯಿ ಯವರು ಕೋವಿಡ್ ಲಸಿಕೆಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಸಂಘಟನೆ ಸೇವೆ, ತ್ಯಾಗ, ಮತ್ತು ಒಗ್ಗಟ್ಟು ಎಂಬ ದ್ಯೇಯದೊಂದಿಗೆ ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಮತ್ತು ಕೆಲಸ ಕಾರ್ಯಗಳನ್ನು ಮಾಡಿ ಸಾಮಾಜಿಕ ಸ್ವಾಸ್ಥ್ಯಸಮಾಜದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕೀರ್ತಿ ಸಂಘಟನೆಗಿದೆ ಎಂದರು.
ಕೋವಿಡ್ ಒಂದನೇ ಅಲೆ ಆರಂಭದಿಂದ ಈ ಧರ್ಮ ಪ್ರಾಂತ್ಯದ ಪ್ರತೀ ಚರ್ಚ್ ಘಟಕಗಳೊಂದಿಗೆ ನಿರಂತರ ಸಂಪರ್ಕ ವನ್ನಿಟ್ಟುಕೊಂಡು ಪ್ರತೀ ಚರ್ಚ್ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಯೊಬ್ಬರಿಗೂ ಅಗತ್ಯ ಸೇವೆ ನೀಡಲಾಗಿದೆ.ಲಾಕ್ ಡೌನ್ ಆದಾಗ ಪ್ರತೀ ಘಟಕದಲ್ಲಿ ಕೋರೋನ ವಾರಿಯರ್ಸ್ ತಂಡವನ್ನು ರಚಿಸಿ ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಔಷಧಿ ಮತ್ತು ಆಂಬುಲೆನ್ಸ್ ಸೇವೆಯನ್ನು ನೀಡಲಾಗಿದೆ. ಚರ್ಚ್ ನ ಹಾಗೂ ಪರಿಸರದ ಎಲ್ಲ ಸಮಾಜದ ಬಂಧುಗಳಿಗೆ ಕೋವಿಡ್ ಲಸಿಕೆ ನೀಡುವ ಹಾಗೂ ಕೊರೋನಾದ ಕುರಿತು ಜಾಗ್ರತಿ ಮೂಡಿಸುವಂಥ ಕಾರ್ಯಕ್ರಮ ಸಹ ನಮ್ಮ ಈ ಸಂಘಟನೆ ಮಾಡಿದೆ
ಕೋವಿಡ್ ಮುಕ್ತ ಸಮಾಜವನ್ನು ರೂಪಿಸಲು ಈ ಸಂಘಟನೆ ಸಾಕಷ್ಟು ಶ್ರಮವಹಿಸಿದೇ. ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು. ಶಿಬಿರದಲ್ಲಿ ಉಪಸ್ಥಿತರಿದ್ದ ಕೆ ಎಂ ಸಿ ವೈದ್ಯರಾದ ಡಾಕ್ಟರ್ ಅರವಿಂದ್ ರವರು ಮಾತನಾಡಿ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವನ್ನು ಓರ್ಥೋಡೆಕ್ಸ್ ಸಿರಿಯನ್ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಬ್ರಹ್ಮಾವರ ಆಯೋಜಿಸಿದೆ.ಸಮಾಜಕ್ಕೆ ನೀಡುತ್ತಿರುವ ಸೇವೆ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಫಾ/ಲಾರೆನ್ಸ್ ಡಿಸೋಜ, ಫಾ/ ಡೇವಿಡ್ ಕ್ರಾಸ್, ಫಾ/ ನೊವೆಲ್ ವಿವಿಸ್, ಫಾl ಅಬ್ರಾಹಂ ಕುರಿಯೋಕಸ್, ಫಾl ಜೋಸೆಫ್ ಜಾಕೊ ಹಾಗೂ ಎಸ್ ಎಂ ಎಸ್ ಚರ್ಚ್ ನ ಟ್ರಸ್ಟಿ ಆಗಿರುವ ಥೋಮಸ್ ಸುವರಿಸ್ ಕಾರ್ಯದರ್ಶಿ ಗಳಾದ ಆಲೆನ್ ರೋಹನ್ ವಾಜ್ ಮತ್ತು ಕೋವಿಡ್ ವಾರಿಯರ್ಸ್ ತಂಡದವರು ಮತ್ತು ಲಸಿಕೆ ಪಡೆಯುವ ಶಿಬಿರಾರ್ತಿಗಳು ಉಪಸ್ಥಿತರಿದ್ದರು