ರಾಜಕೀಯ ಧುರೀಣ ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾಂ ವಿಧಿವಶ
ಹೆಬ್ರಿ (ಉಡುಪಿ ಟೈಮ್ಸ್ ವರದಿ): ಧಾರ್ಮಿಕ, ಸಾಮಾಜಿಕ ,ರಾಜಕೀಯ ಧುರೀಣರಾದ ಹೆಬ್ರಿ ಕೆ. ರತ್ನಾಕರ್ ಶೆಟ್ಟಿ ಬೆಳಗಾಂ ಅವರು ಮಂಗಳವಾರ ವಿಧಿವಶರಾದರು. ಬೆಳಗಾಂನಲ್ಲಿ ತನ್ನ ಉದ್ಯಮವನ್ನು ಸ್ಥಾಪಿಸಿ, ಹಲವರಿಗೆ ಉದ್ಯೋಗದಾತರಾಗಿ ಸಮಾಜಸೇವಕರಾಗಿ ಗುರುತಿಸಿಕೊಂಡವರು.
ಸತೀಶ್ ಜಾರಕಿಹೋಳಿ ಅವರ ಆಪ್ತರಾಗಿದ್ದ ರತ್ನಾಕರ್ ಶೆಟ್ಟಿ ಮೃದು ಸ್ವಾಭಾವಿಯಾಗಿದ್ದು. ಇವರು ಬೆಳಗಾವಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ, ದಿ. ಬೆಳಗಾಂವ ಮರ್ಚಂಟ್ಸ್ ಕೊ ಆಪ್ ಕ್ರೆಡಿಟ್ ಸೊಸೈಟಿ ಲಿ.ಬೆಳಗಾವಿ ಇದರ ಅಧ್ಯಕ್ಷರಾಗಿ, ಹೆಸ್ಕಾಮ್ ಬೆಳಗಾವಿ ಉತ್ತರದ ನಾಮ ನಿರ್ದೇಶನ ಸದಸ್ಯರಾಗಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿಯೂ ಇನ್ನು ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ನಾಲ್ವರು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.