ಕೋಟ: ಅಶಕ್ತ ಕುಟುಂಬಗಳಿಗೆ ಆರ್ಥಿಕ ಸಹಾಯಹಸ್ತ, ದಿನಸಿ ಕಿಟ್ ವಿತರಣೆ
ಕೋಟ (ಉಡುಪಿ ಟೈಮ್ಸ್ ವರದಿ): ಕಳೆದೆರಡು ವರ್ಷಗಳಿಂದ ದೇಶದ ಜನತೆಯನ್ನು ಕಾಡುತ್ತಿರುವ ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಜನರ ಬದುಕು ಕೂಡಾ ಹೈರಾಣವಾಗಿಸಿದೆ. ಈ ನಿಟ್ಟಿನಲ್ಲಿ ಹಲವು ಉದ್ಯಮಿಗಳು ಆಶಕ್ತ ಕುಟುಂಬಗಳಿಗೆ ಕಿಟ್ ವಿತರಿಸಿ ಮಾನವೀಯತೆ ತೋರಿದ್ದಾರೆ. ಇಲ್ಲಿನ ಕೋಟತಟ್ಟು ಭಾಗದ ಅಶಕ್ತ ಕುಟುಂಬಗಳಿಗೆ ಧರ್ಮದರ್ಶಿಯೊರ್ವರು ಕಳೆದೆರಡು ವರ್ಷಗಳಿಂದ ಕೋವಿಡ್ ನಿಂದ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸದ್ದಿಲ್ಲದೆ ಸಹಾಯಹಸ್ತ ಚಾಚುತ್ತಿದ್ದು ನೀಡುತ್ತಿದ್ದಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳ ಧರ್ಮದರ್ಶಿ ಕೆ.ಅನಂತಪದ್ಮನಾಭ ಐತಾಳ್ ಹಾಗೂ ತಮ್ಮ ಸಹೋದರ ಶಿವಾನಂದ ಐತಾಳ್ ಸಹಕಾರದೊಂದಿಗೆ ತಮ್ಮ ಊರಿನ ಅಶಕ್ತ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಆರ್ಥಿಕ ಸಹಾಯಹಸ್ತ ಚಾಚಿ ಮಾನವೀಯತೆಗೆ ಮುನ್ನುಡಿ ಬರೆದಿದ್ದಾರೆ.
ಸೋಮವಾರ ಊರಿನ ಹಿರಿಯರಾದ ಪಾರ್ವತಮ್ಮ ಶಂಕರನಾರಾಯಣ ಹೊಳ್ಳರ ಸಮ್ಮುಖದಲ್ಲಿ ಕಿಟ್ ವಿತರಿಸಲಾಯಿತು. ಸುಮಾರು ಒಂದು ಲಕ್ಷಕ್ಕೂ ಅಧಿಕ ರೂ ವೆಚ್ಚದಲ್ಲಿ ದಿನಸಿ ಕಿಟ್ ಹಾಗೂ ಪ್ರತಿಯೊಂದು ಅಶಕ್ತ ಕುಟುಂಬಗಳಿಗೆ ಹಣದ ಆರ್ಥಿಕ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಅನುಪಮ ಕೆ ಅನಂತಪದ್ಮನಾಭ ಐತಾಳ್, ಪುತ್ರ ಆದಿತ್ಯ ಐತಾಳ್, ವಿಶಾಲಾಕ್ಷಿ .ವಿ ಐತಾಳ್, ಸವಿತಾ.ವಿ ಉಡುಪ, ವೆಂಕಟೇಶ ಉಡುಪ, ಮಧುರಾ, ಮೈತ್ರಿ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.