ಕೋಟ: ಪಂಚವರ್ಣ ಯುವಕ ಮಂಡಲದ ವತಿಯಿಂದ ಕೊಡುಗೆ

ಕೋಟ(ಉಡುಪಿ ಟೈಮ್ಸ್ ವರದಿ): ಕೋಟದ ಪಂಚವರ್ಣ ಯುವಕ ಮಂಡಲದ ವತಿಯಿಂದ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕಡುಬಡತನದ ಪಂಜು ಮೊಗವೀರ ಇವರ ಮನೆಯ ಹೊದಿಕೆಗೆ ಟಾರ್ಪಲ್ ಕೊಡುಗೆಯಾಗಿ ನೀಡಲಾಯಿತು.

ಪ್ರತಿ ವರ್ಷ ಈ ಕುಟುಂಬಕ್ಕೆ ಯುವಕ ಮಂಡಲ ಟಾರ್ಪಲ್ ವ್ಯವಸ್ಥೆ ಮಾಡುತ್ತಿದ್ದು ಈ ವರ್ಷ ಕೂಡಾ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗರ ಮೂಲಕ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಪಂಚವರ್ಣ ಸಲಹಾ ಸಮಿತಿ ಸದಸ್ಯ ಚಂದ್ರ ಪೂಜಾರಿ,ಸದಸ್ಯ ಶಶಿಧರ ತಿಂಗಳಾಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!