ಅಮೇರಿಕಾದ ಮಿಯಾಮಿನಲ್ಲಿರುವ ಯಕ್ಷಪ್ರೇಮಿಗಳಿಂಂದ ಕಲಾವಿದರಿಗೆ ನೆರವು
ಉಡುಪಿ(ಉಡುಪಿ ಟೈಮ್ಸ್ ವರದಿ) : ಅಮೇರಿಕಾದ ಮಿಯಾಮಿಯಲ್ಲಿ ವಾಸಿಸುತ್ತಿರುವ ಯಕ್ಷ ಪ್ರೇಮಿ ಆರ್.ಜಿ.ಭಟ್‌ರ ಸಹೋದರರಾಗಿರುವ ಮಹದೇವ ಜಿ. ಭಟ್ ವರ್ಗಾಸರ ತನ್ನ ಸ್ನೇಹಿತರ ಜತೆಗೂಡಿ ಕರೋನಾದಿಂದಾಗಿ ಸಂಕಷ್ಟಕ್ಕೊಳಗಾದ ಯಕ್ಷಗಾನ ಕಲಾವಿದರಿಗಾಗಿ ಸುಮಾರು 1700 ಡಾಲರ್ (ರೂ. 1 ,21,000-) ರಷ್ಟು ಧನ ಸಹಾಯ ಮಾಡಿದ್ದಾಗಿ ಕಲಾರಂಗ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ ಅರ್ಹ ವ್ಯಕ್ತಿಗಳಿಗೆ ಈ ಹಣವನ್ನ ಹಂಚಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹಾಗೂ ಧನ ಶಾಯ ಮಾಡಿದ ಮಹಾದೇವ ಜಿ. ಭಟ್ ಹಾಗೂ ಅವರ ಬಳಗಕ್ಕೆ ಸಮಸ್ತ ಯಕ್ಷಗಾನ ಅಭಿಮಾನಿಗಳ ಪರವಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ