“ಅನಾಥರೊಂದಿಗೆ ಒಂದು ದಿನ” : ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅನಾಥಾಶ್ರಮಕ್ಕೆ ಅರೋಗ್ಯ ಕಿಟ್ ವಿತರಣೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಬ್ಲಾಕ್ ಕಾಂಗ್ರೆಸ್ ಹೆಬ್ರಿ ಹಾಗೂ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಆಶ್ರಯದಲ್ಲಿ “ಅನಾಥರೊಂದಿಗೆ ಒಂದು ದಿನ” ಕಾರ್ಯಕ್ರಮದಡಿಯಲ್ಲಿ ಅನಾಥ ಮಕ್ಕಳ ಆಶಾಕಿರಣ ಉಡುಪಿಯ ಸಂತೆಕಟ್ಟೆಯ ಕೃಷ್ಣಾನುಗ್ರಹ ಅನಾಥಾಶ್ರಮಕ್ಕೆ ಬೇಟಿ ನೀಡಿ ಪಕ್ಷದ ವತಿಯಿಂದ ಕೊರೋನಾ ನಿರ್ವಹಣೆಯ ಮೂಲಭೂತ ಆದ್ಯತೆಯಡಿಯಲ್ಲಿ ಅರೋಗ್ಯ ಪರಿಕರಗಳನ್ನೊಳಗೊಂಡ 12 ಸಾವಿರ ರೂ. ಮೌಲ್ಯದ ಪ್ಯಾಕೇಜನ್ನು ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಡಿದ ರೂ.10,000 ಆರ್ಥಿಕ ಸಹಾಯ ಧನವನ್ನು ಅನಾಥಾಶ್ರಮಕ್ಕೆ ನೀಡಲಾಯಿತು.
ಕಾರ್ಯಕ್ರಮವನ್ನು ಕಾರ್ಕಳ ನಗರ ಕಾಂಗ್ರೆಸ್ ಅಧ್ಯಕ್ಷ ಮದುರಾಜ್ ಶೆಟ್ಟಿ ನೇತೃತ್ವ ವಹಿಸಿದ್ದು ,ಜಿಲ್ಲಾ ಕಾಂಗ್ರೆಸ್ ಆಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅನಾಥಾಶ್ರಮದ ಆಡಳಿತಾಧಿಕಾರಿ ಉದಯ ಕುಮಾರ್ರವರಿಗೆ ಪ್ಯಾಕೇಜ್ ಹಸ್ತಾಂತರಿಸಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನಲಿಯೋ, ಹಿರಿಯ ಕಾಂಗ್ರೆಸ್ಸಿಗ ನವೀನ್ ದೇವಾಡಿಗ ಡಾ.ಸುನೀತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಜನಾರ್ಧನ ಭಂಡಾರ್ಕಾರ್, ಮಾಧವ ಬನ್ನಂಜೆ, ಸೌರಭ್ ಬಲ್ಲಾಳ್, ಸದಾಶಿವ ಕಟ್ಟೆಗುಡ್ಡೆ, ಸುನೀಲ್ ಕುಮಾರ್ ಭಂಡಾರಿ, ಸುನೀಲ್ ಕೋಟ್ಯಾನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿಯವರು ಪ್ರಸ್ತಾವನೆ ಗೈದು ಸ್ವಾಗತಿಸಿ ವಂದಿಸಿದರು.