ಜೆಸಿಐ ಕುಂದಾಪುರ ಹಾಗೂ ರೆಡ್ ಕ್ರಾಸ್ ಕುಂದಾಪುರ ಜಂಟಿ ಆಶ್ರಯದಲ್ಲಿ ನಮ್ಮ ಭೂಮಿ ಸಂಸ್ಥೆಯ ಮಕ್ಕಳಿಗೆ ಶಿಕ್ಷಣ ಪೂರಕ ಕಿಟ್ ವಿತರಣೆ

ಕುಂದಾಪುರ (ಉಡುಪಿ ಟೈಮ್ಸ್ ವರದಿ):” ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ನಮ್ಮ ಭೂಮಿ ಸಂಸ್ಥೆ ಅನೇಕ ಕಷ್ಟದಲ್ಲಿರುವವರಿಗೆ ದಾರಿ ದೀಪವಾಗಿದೆ ಇಂಥ ಸಂಸ್ಥೆಗಳಿಗೆ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜೆಸಿಐ ಕುಂದಾಪುರ ವತಿಯಿಂದ ಶಿಕ್ಷಣಕ್ಕೆ ಪೂರಕವಾಗುವ ಅಗತ್ಯ ವಸ್ತುಗಳನ್ನು ನೀಡಲು ಸಂತೋಷ ತಂದಿದೆ” ಎಂದು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ್ ಶೆಟ್ಟಿ ನುಡಿದರು. ಜೆಸಿಐ ಕುಂದಾಪುರ ಹಾಗೂ ರೆಡ್ ಕ್ರಾಸ್ ಕುಂದಾಪುರ ಜಂಟಿ ಆಶ್ರಯದಲ್ಲಿ ನಮ್ಮ ಭೂಮಿ ಸಂಸ್ಥೆಯ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗುವ ಕಿಟ್ ಗಳನ್ನೂ ಇತ್ತೀಚೆಗೆ ಕೋವಿಡ್ ನಿಯಮಾನುಸಾರವಾಗಿ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಜೆಸಿಐ ಕುಂದಾಪುರದ ಅಧ್ಯಕ್ಷ ಜೆಸಿ ವಿಜಯ ನರಸಿಂಹ ಐತಾಳ್ ” ಮಾನವಕುಲದ ಸೇವೆಯೇ ಅತ್ಯುತ್ತಮ ಕಾರ್ಯ ಎಂದು ಜೆಸಿ ವಾಣಿಯಲ್ಲಿ ಉಲ್ಲೇಖವಾಗಿದ್ದು ಅದರಂತೆ ಈ ಕೋವಿಡ್ ಕಷ್ಟದ ಸಮಯದಲ್ಲಿ ಜೆಸಿಐ ಕುಂದಾಪುರ ಸಂಸ್ಥೆಯ ಹಾಗೂ ರೆಡ್ ಕ್ರಾಸ್ ವತಿಯಿಂದ ಅನೇಕ ಸಮಾಜಮುಖಿ ಕಾರ್ಯವನ್ನ ಮಾಡುತ್ತಿದ್ದೇವೆ” ಎಂದರು
ಕಾರ್ಯಕ್ರಮದಲ್ಲಿ ನಮ್ಮ ಭೂಮಿ ಸಂಸ್ಥೆಯ ಕಾರ್ಯಕರ್ತರಾದ ರತ್ನಮ್ಮ, ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳಾದ ಡಾ. ಸೋನಿ, ವೈ ಸೀತಾರಾಮ ಶೆಟ್ಟಿ, ಗಣೇಶ್ ಆಚಾರ್ಯ, ನಮ್ಮ ಭೂಮಿ ಸಂಸ್ಥೆಯ ತರಬೇತುದಾರದ ಮಂಜುನಾಥ್, ಕಾರ್ಯಕ್ರಮದ ಯೋಜನಾಧಿಕಾರಿಯಾದ ಜೆಸಿ ಸುನಿಲ್ ಗುಲ್ವಾಡಿ, ಜೆಸಿಐ ಕುಂದಾಪುರದ ಉಪಾಧ್ಯಕ್ಷ ಮುತಾರೀಫ್ ಮಾಧ್ಯಮ ಪ್ರತಿನಿಧಿ ರಾಘವೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!