ಕೋಟತಟ್ಟು – ಕೊರೋನಾ ಮುಕ್ತ ಗ್ರಾಮ ಮಾಡುವತ್ತ ಪಣ, ಗ್ರಾಮೀಣ ಕಾರ್ಯಪಡೆ ಸಭೆ
ಕೋಟ (ಉಡುಪಿ ಟೈಮ್ಸ್ ವರದಿ): ಕೋವಿಡ್ 2 ಅಲೆ ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನೆಲೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಚನೆಗೊಂಡಿರುವ ಕೋಟತಟ್ಟು ಗ್ರಾಮೀಣ ಕಾರ್ಯಪಡೆ ಸಭೆಯು ಜೂ. 07 ರಂದು ಕೋಟತಟ್ಟು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ಎಸ್ ಪೂಜಾರಿ ಕೊರೋನಾ ಮುಕ್ತ ಗ್ರಾಮ ಮಾಡುವ ಸಲುವಾಗಿ ಕಾರ್ಯಪಡೆಗೆ ಸಮಗ್ರ ಮಾಹಿತಿ ಸೂಚನೆ ನೀಡಿದರು. ಅದರಂತೆ ವಿಶೇಷ ಚೇತನರಿಗೆ ಕೋರೋನ ಲಸಿಕೆ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು.
ನೋಡಲ್ ಅಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಸತೀಶ್, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ರಾಬರ್ಟ್ ರೊಡ್ರಿಗಸ್, ಸಾಹಿರ ಬಾನು, ಜ್ಯೋತಿ, ವಿದ್ಯಾ, ಕುಮಾರಿ ಪೂಜಾ, ಗ್ರಾಮ ಲೆಕ್ಕಾಧಿಕಾರಿಯಾದ ಚಲುವರಾಜು, ಪೊಲೀಸ್ ಇಲಾಖೆಯ ಮೋಹನ್ ಕೊತ್ವಾಲ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೋಟ.ಜೂ.೭ ಕೋಟತಟ್ಟು ಕೋವಿಡ್ ಸಭೆ