ಕಾರ್ಮಿಕರಿಗೆ ಪರಿಹಾರ – ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಉಡುಪಿ (ಉಡುಪಿ ಟೈಮ್ಸ್ ವರದಿ): ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕ ವಲಯದ ಕಾರ್ಮಿಕರು ರೂ. 2000 ಪರಿಹಾರ ಪಡೆಯಲು ಈಗಾಗಲೇ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಅನ್‌ಲೈನ್ ಮೂಲಕ ಮೇ 19 ರೊಳಗೆ ನೋಂದಣಿ ಮಾಡುವ ನಿಗದಿತ ದಿನಾಂಕ ಜೂನ್ 10 ವಿಸ್ತರಣೆಯಾಗಿರುವುದಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರದ ಹೊಸ ಆದೇಶದಂತೆ ಜೂನ್ 10 ರವರೆಗೆ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ನೋಂದಣಿ ಮಾಡಿದ 11 ವಲಯದ ಕಾರ್ಮಿಕರ ಮಾಹಿತಿಯನ್ನು ಪರಿಗಣಿಸುವುದಾಗಿ ಆದೇಶವಾಗಿದ್ದು, ಅವರು ಪುನ: ಸೇವಾ ಸಿಂಧು ತಂತ್ರಾಶದಲ್ಲಿ ಪ್ರತ್ಯೆಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂಬ ಮಾಹಿತಿಯನ್ನು ಮತ್ತು ಸೇವಾ ಸಿಂಧು ತಂತ್ರಾಶದಲ್ಲಿ ರೂ 2000.00 ಪರಿಹಾರಕ್ಕಾಗಿ 11 ವಲಯದ ಕಾರ್ಮಿಕರು ಜುಲೈ 31 ರ ವರೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಕಾರ್ಮಿಕರು ಯೋಜನೆಯ ಪ್ರಯೋಜನ ಪಡೆಯುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!