ಸುಂದರ್ ಕಪ್ಪೆಟ್ಟು ಧೂಳು ಮುಸಿಕಿದ ವಜ್ರ: ಜಯನ್ ಮಲ್ಪೆ
ಮಲ್ಪೆ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ದಲಿತರ ಸಂಘಟನೆಗೆ ಆಸ್ತಿವಾರ ಹಾಕಿದ ಅನುಭವಿ, ಬಡಜನರ ಸೇವಕ ಸುಂದರ್ ಕಪ್ಪೆಟ್ಟು ದಲಿತ ಚಳವಳಿಯಲ್ಲಿ ಧೂಳು ಮುಸಿಕಿದ ವಜ್ರದಂತೆ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ರವಿವಾರ ಮಲ್ಪೆ ಗಾಂಧಿ ಶಾಲಾ ವಠಾರದಲ್ಲಿ ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರ ಶಾಖೆ ಆಯೋಜಿಸಿದ ಹಿರಿಯ ಹೋರಾಟಗಾರ ಸುಂದರ್ ಕಪ್ಪೆಟ್ಟುವಿನ ಶದ್ರಾಂಜಲಿ ಸಭೆಯಲ್ಲಿ ನೆನೆಪುಗಳ ನುಡಿ ನಮನದ ಮಾತುಗಳಲ್ಲಿ ಸಾಮಾಜಿಕ ನ್ಯಾಯದ ಹರಿಕಾರನಾಗಿ ವಿಘಟನೆಗೊಂಡಿರುವ ದಲಿತ ಸಂಘಟನೆಗಳ ಒಗ್ಗೂಡಿಕೆಗಾಗಿ ರಾತ್ರಿ ಹಗಲು ಶ್ರಮಿಸಿದ್ದ ಅವರು ನಮ್ಮ ಯುವ ಪೀಳಿಗೆಗೆ ಹೋರಾಟದ ಚಿಲುಮೆಯಾಗಿದ್ದಾರೆ ಎಂದರು.
ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ ದಮನಿತರ ಮೇಲಿನ ಅನ್ಯಾಯಗಳ ವಿರುದ್ಧ ಹೋರಾಡಿದ ಸುಂದರ್ ಕಪ್ಪೆಟ್ಟು ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ದನಿಯೆತ್ತುತ್ತಾ ಬಂದವರು ಎಂದರು. ಯುವಸೇನೆಯ ಜಿಲ್ಲಾಧ್ಯಾಕ್ಷ ಹರೀಶ್ ಸಾಲ್ಯಾನ್ ಶ್ರದ್ದಾಂಜಲಿ ಅರ್ಪಿಸುತ್ತಾ, ಕೋಮುವಾದ, ಜಾತೀಯತೆ, ಆಳುವ ಶಕ್ತಿಗಳು ನಡೆಸುವ ದೌರ್ಜನ್ಯಗಳ ವಿರುದ್ಧ ಹೋರಾಟದಲ್ಲಿ ಸಕ್ರಿಯರಾಗಿದ್ದರು ಎಂದರು.
ದಲಿತ ಮುಖಂಡರುಗಳಾದ ಕೃಷ್ಣ ಶ್ರೀಯಾನ್ ನೆರ್ಗಿ, ಅರುಣ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ಗುಣವಂತ ತೊಟ್ಟಂ, ಸುಮಿತ್ ನೆರ್ಗಿ, ಪ್ರಸಾದ್ ಮಲ್ಪೆ, ರಾಮೋಜಿ ಅಮೀನ್, ಸತೀಶ್ ಕಪ್ಪೆಟ್ಟು, ಪ್ರಶಾಂತ್ ಬಿ.ಎನ್, ಸುಶೀಲ್, ಶಶಿಕಲಾ ತೊಟ್ಟಂ, ವಿನೋದ, ಸಂದ್ಯಾ, ವಸಂತಿ, ವಸಂತಿ ಬಲರಾಮ ನಗರ, ವಿನೋದ ವಡಭಾಂಡೇಶ್ವರ, ಪ್ರದೀಪ್, ಶಂಕರ್ ನೆರ್ಗಿ ಮತ್ತು ಪ್ರಶಾಂತ್ ನೆರ್ಗಿ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಗಲಿದ ಸುಂದರ್ ಕಪ್ಪೆಟ್ಟರ ಭಾವ ಚಿತ್ರಕ್ಕೆ ಹೂವು ಹಾಕಿ ನೆನಪಿನ ನಮನ ಸಲ್ಲಿಸಿದರು.