ಉಡುಪಿ: ಉತ್ತಮ ಗುಣಮಟ್ಟದ ಕಾಮಗಾರಿ ಶೀಘ್ರವಾಗಿ ನಡೆಸುವಂತೆ ಆಗ್ರಹ
ಉಡುಪಿ,ಜೂ.5(ಉಡುಪಿ ಟೈಮ್ಸ್ ವರದಿ): ಕರಾವಳಿ ಬೈಪಾಸ್ ಬಳಿ, ಮಲ್ಪೆಯಿಂದ ಮಣಿಪಾಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿ ಮೆಲ್ಭಾಗದಲ್ಲಿ ಸ್ಲ್ಯಾಬ್ ಹಾಕುವ ಕಾಮಗಾರಿ ನಡೆಯುತ್ತಿದೆ. ಒಮ್ಮೆ ಕಳಪೆ ಮಟ್ಟದ ಕಾಮಗಾರಿಯಿಂದ ಸ್ಲ್ಯಾಬ್ ಕುಸಿದು ಬಿದ್ದಿತ್ತು.
ಇದೀಗ ಮರುಕಾಮಗಾರಿಗೆ ಚಾಲನೆ ದೊರತರೂ., ಸರಳು ಜೋಡಿಸಿಟ್ಟು ಬಹಳ ದಿನಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿ ಸಂಚಾರಕ್ಕೂ ತೊಂದರೆಯಾಗುತ್ತಿದ್ದು, ಅಪಘಾತ ಸಂಭವಿಸುವ ವಲಯವಾಗಿ ಮಾರ್ಪಟ್ಟಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಉತ್ತಮಗುಣಮಟ್ಟದ ಕಾಮಗಾರಿ ನಡೆಸಬೇಕು. ಶೀಘ್ರವಾಗಿ ಸಂಚಾರಕ್ಕೆ ಹೆದ್ದಾರಿ ಅನುವು ಮಾಡಿಕೊಡಬೇಕೆಂದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಆಗ್ರಹಿಸಿದ್ದಾರೆ.