ಕೋಟ: ಸಮಾಜ ಸೇವೆಗೆ ಸದಾ ಸಿದ್ದವಾಗಿರುವ ಜೈ ಕುಂದಾಪುರ ಟ್ರಸ್ಟ್
ಕೋಟ ಜೂ.5( ಉಡುಪಿ ಟೈಮ್ಸ್ ವರದಿ): ಸಣ್ಣ ಸಹಾಯ ಮಾಡಿ ದೊಡ್ಡದಾಗಿ ಪ್ರಚಾರ ಪಡೆದುಕೊಳ್ಳುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಇಲ್ಲೊಂದು ಸಂಸ್ಥೆ ಕಳೆದ ಹಲವಾರು ವರುಷಗಳಿಂದ ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಅನೇಕರ ಬಾಳಿನ ಆಶಾಕಿರಣವಾಗಿ ಬೆಳಗುತ್ತಿದೆ.
ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ತಂಡದ ಹೆಸರು ಎಲ್ಲೋ ಕೇಳಿದ ಹಾಗೆ ಇದೆ ಅಂತ ಅಂದುಕೊಳ್ಳುತ್ತಿರಬಹುದು. ಖಂಡಿತಾ ಈ ಟ್ರಸ್ಟ್ ನ ವೈಶಿಷ್ಟ್ಯವೇ ಅದು ಪ್ರಚಾರ ಬಯಸದೆ ಸದ್ದಿಲ್ಲದೆ ಅಸಾಹಯಕರಿಗೆ ನೆರವು ನೀಡುವುದೇ ಈ ಟ್ರಸ್ಟ್ ನ ಕಾರ್ಯ.
ಕಳೆದ ವರ್ಷ ಕೋವಿಡ್ ನ ಮೊದಲ ಅಲೆ ಎಲ್ಲೆಡೆ ಆಹಾಕಾರ ಸೃಷ್ಟಿ ಸಿತ್ತು. ಇನ್ನೇನು ಕೋವಿಡ್ ಅಂತ್ಯಗೊಂಡು ಎಲ್ಲಾ ಸರಿಹೋಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ತೀವ್ರ ಸ್ವರೂಪದಲ್ಲಿ ಕೋವಿಡ್ 2 ನೇ ಅಲೆ ಅಪ್ಪಳಿಸಿತು. ಮತ್ತೆ ಚೇತರಿಸಿಕೊಳ್ಳುತ್ತಿದ್ದ ಆರ್ಥಿಕ ಚಟುವಟಿಕೆಗಳು ನೆಲಕ್ಕೆ ಕುಸಿದುಹೋಗಿದ್ದು, ಅದೆಷ್ಟೋ ಮಂದಿ ಉದ್ಯೋಗ ಕಳೆದುಕೊಂಡಿರುವುದರಿಂದ ಅನೇಕರ ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ. ಇಂತಹ ಸಂದರ್ಬದಲ್ಲಿ ಅಶಕ್ತರಿಗೆ ನೆರವಾದ ಅನೇಕರಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ ಕೂಡಾ ಒಂದು. ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ಅಶಕ್ತರಿಗೆ ವೈದ್ಯಕೀಯ ನೆರವು, ತುರ್ತುಸಂದರ್ಭದಲ್ಲಿ ರಕ್ತದಾನ, ರಕ್ತ ದಾನ ಶಿಬಿರ ಆಯೋಜನೆ, ಆಹಾರ ಕಿಟ್ ವಿತರಿಸುವ ಕಾರ್ಯ ನಡೆಯುತ್ತಿದೆ.
ಕಳೆದೆರಡು ವಾರದಿಂದ ಟ್ರಸ್ಟ್ ವತಿಯಿಂದ ಕುಂದಾಪುರ, ಕೋಟೇಶ್ವರ,ತಲ್ಲೂರು, ಹಟ್ಟಿಯಂಗಡಿ ಕ್ರಾಸ್ ಹೀಗೆ ಹಲವಾರು ಪ್ರದೇಶಗಳಲ್ಲಿ ಉಳಿದುಕೊಂಡಿರುವ ನಿರಾಶ್ರಿತರಿಗೆ,ಕಾರ್ಮಿಕರಿಗೆ, ಭಿಕ್ಷುಕರಿಗೆ, ಲಾರಿ ಚಾಲಕರಿಗೆ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಮಾನವೀಯತೆಯ ಕಾರ್ಯ ನಡೆಯುತ್ತಿದೆ.
ದಾನಿಗಳ ಸಹಾಯ ದಿಂದ ದಿನಗೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಹಸಿವು ನೀಗಿಸುವ ಮಹತ್ಕಾರ್ಯ ಈ ಟ್ರಸ್ಟ್ ಮೂಲಕ ನಡೆಯುತ್ತಿದೆ. ಇವರ ಈ ಕಾರ್ಯದಲ್ಲಿ ಪ್ರತಿದಿನ ಊಟ ತಯಾರಿಸಲು ಕೋಟ ಶ್ರೀ ಶನೀಶ್ವರ ಸ್ವಾಮಿ ದೇವಳದ ಪಾತ್ರಿ ಭಾಸ್ಕರ ಸ್ವಾಮಿ ಹಾಡಿಕೆರೆಬೆಟ್ಟು ಅವರು ಸಹಕರಿಸುತ್ತಿದ್ದು, ಟ್ರಸ್ಟ್‌ನ ಸಂಸ್ಥಾಪಕ ಪುಂಡಲೀಕ ಮೊಗವೀರ ತೆಕ್ಕಟ್ಟೆ, ಸಂಸ್ಥೆಯ ನಿರ್ವಾಹಕ ಜಯರಾಜ್ ಸಾಲಿಯಾನ್ ಪಡುಕೆರೆ, ಸಂತೋಷ್ ಹಾಡಿಕೆರೆಬೆಟ್ಟು ಸುರೇಶ್ ಮಂದಾರ್ತಿ, ಸಂತೋಷ್
ಪಡುಕೆರೆ,ಮನೀಶ್ ಕುಲಾಲ್ ಜನ್ನಾಡಿ, ಅಕ್ಷಯ ಕೋಟ,ಆದರ್ಶ ಹಾಡಿಕೆರೆ, ಮಂಜುನಾಥ ಹಾಡಿಕೆರೆ, ಹಾಗೆ ಮಹಿಳಾ ಘಟಕದ ಸದಸ್ಯರು ಶ್ರೀ ದೇವಿ, ಶಾರದ ತೆಕ್ಕಟ್ಟೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಡುಬಡತನದಲ್ಲಿರುವ ಅಶಕ್ತ ಕುಟುಂಬಗಳಿಗೆ ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಟ್ರಸ್ಟ್ ನಡೆಸುತ್ತಿದೆ. ಇನ್ನು ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವವರು ಟ್ರಸ್ಟ್ ಸಂಪರ್ಕಿಸಬಹುದು ಎಂದು ಟ್ರಸ್ಟ್ ನ ಪ್ರಮುಖರು ತಿಳಿಸಿದ್ದು, ಸಂಸ್ಥೆಯ ಅನ್ನದಾಸೋಹ, ಆಹಾರ ಕಿಟ್, ವೈದ್ಯಕೀಯ ನೆರವು ಸೇವೆಯಲ್ಲಿ ಭಾಗಿದಾರಿಕೆ ಆಗಲು ಬಯಸುವವರು ಟ್ರಸ್ಟ್‌ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಧನಸಹಾಯ ಮಾಡುವವರಿದ್ದರೆ
Jai Kundapra seva Trust(R)
IFSC code:- BARB0VJKMBH
Acount number:-81740100002624
Bank Name:- Bank off baroda
Branch:- Kumbhashi
ಹೆಚ್ಚಿನ ಮಾಹಿತಿಗಾಗಿ Mb:- 8861188714 &
8970658909 – 9743470264