ವಿಮಾನ ಪತನ- 28 ಮಂದಿ ಮೃತ್ಯು, ಇಬ್ಬರು ಗಂಭೀರ
ದಕ್ಷಿಣ ಕೊರಿಯಾ: 181 ಜನರು ಪ್ರಯಾಣಿಸುತ್ತಿದ್ದ ಜೆಜು ಏರ್ ವಿಮಾನ ಪತನಗೊಂಡು ಸುಮಾರು 28 ಜನ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಥೈಲ್ಯಾಂಡ್‌ನ ಬ್ಯಾಂಕಾಕ್‌ನಿಂದ ಹೊರಟ ವಿಮಾನ ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಂದರ್ಭ ಸ್ಥಳೀಯ ಕಾಲಮಾನ 9:07 ಕ್ಕೆ ರನ್‌ವೇಯಿಂದ ಹೊರಬಿದ್ದು ಬೇಲಿಗೆ ಬಡಿದಿದೆ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ತೋರಿಸಿರುವಂತೆ ವಿಮಾನದಿಂದ ದಟ್ಟ ಹೊಗೆ ಬರುತ್ತಿರುವುದನ್ನು ತೋರಿಸಿದೆ. ವಿಮಾನದಲ್ಲಿ 181 ಮಂದಿಯಲ್ಲಿ 175 ಮಂದಿ ಪ್ರಯಾಣಿಕರು ಮತ್ತು ಆರು ಮಂದಿ ವಿಮಾನ ಸಿಬ್ಬಂದಿ ಇದ್ದರು ಎಂದು ವರದಿ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರದಿದೆ.