ಡಿ.29: ಬೈಲೂರು ದೇವಸ್ಥಾನದಲ್ಲಿ “ಕೋಟಿ ಗಾಯತ್ರಿ ಜಪ ಯಜ್ಞ ಹಾಗೂ ಚಂಡಿಕಾಯಾಗ”

Oplus_131072

ಉಡುಪಿ: ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ವತಿಯಿಂದ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.29 ರಂದು ಕೋಟಿ ಗಾಯತ್ರಿ ಜಪ ಯಜ್ಞ ಹಾಗೂ ಚಂಡಿಕಾಯಾಗ ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 28 ರಂದು ಬೆಳಗ್ಗೆ 8 ರಿಂದ ತಂತ್ರಿಗಳ ಹಾಗು ಋತ್ವಿಜರ ಸ್ವಾಗತ, ಸಾಮೂಹಿಕ ದೇವತಾ ಪ್ರಾರ್ಥನೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ 6 ರಿಂದ ಅರಣಿಮಥನ, ಅಗ್ನಿ ಜನನ, ಕುಂಡ ಸಂಸ್ಕಾರ ಜರುಗಲಿದೆ ಎಂದರು. ಡಿ.29 ರಂದು ಮುಂಜಾನೆ 6 ರಿಂದ ಪ್ರಾರ್ಥನೆ, 8 ರಿಂದ ವಿಪ್ರ ಮಹಿಳೆಯರಿಂದ ಸ್ತೋತ್ರ ಪಠಣ, ಕುಂಕುಮಾರ್ಚನೆ ನಡೆಯಲಿದೆ. 9.30 ಕ್ಕೆ ಚಂಡಿಕಾಯಾಗ ಪೂರ್ಣಹುತಿ, 10 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥರು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥರು ಭಾಗವಹಿಸಲಿದ್ದು, ಅಷ್ಟಾವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಧಾರ್ಮಿಕ ಪ್ರವಚನ ನೀಡುವರು.

11.30 ಕ್ಕೆ ಮಹಾಪೂಜೆ, ಮಂತ್ರಾಕ್ಷತೆ ಜರುಗಲಿದ್ದು, 12.30 ಅನ್ನಸಂತರ್ಪಣೆ ಇರಲಿದೆ ಎಂದು ವಿವರಿಸಿದರು. ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷ ವೈ.ಸುಧಾಕರ್ ಭಟ್, ಪ್ರ.ಕಾರ್ಯದರ್ಶಿ ಗಣೇಶ ರಾವ್, ಕೋಶಾಧಿಕಾರಿ ಕೆ.ಎಸ್.ಕೇಶವ್ ರಾವ್, ಕಾಂತಿ ರಾವ್, ಪವಿತ್ರ ಅಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!