ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನಲ್ಲಿ ವಿಶ್ವ ವಜ್ರ- ಡೈಮಂಡ್ ಪ್ರದರ್ಶನಕ್ಕೆ ಚಾಲನೆ
ಉಡುಪಿ, ಡಿ.25: ನಗರದ ವಿಎಸ್‌ಟಿ ರಸ್ತೆಯ ವೆಸ್ಟ್‌ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಜ.12ರವರೆಗೆ ಹಮ್ಮಿಕೊಳ್ಳಲಾದ ವಿಶ್ವ ವಜ್ರ- ಡೈಮಂಡ್ ಪ್ರದರ್ಶನಕ್ಕೆ ಇಂದು ಚಾಲನೆ ನೀಡಲಾಯಿತು.
ಪ್ರದರ್ಶನವನ್ನು ಉದ್ಘಾಟಿಸಿದ ಬಿಜೆಪಿ ನಾಯಕಿ ವೀಣಾ ಎಸ್. ಶೆಟ್ಟಿ ಮಾತನಾಡಿ, ಇವತ್ತು ಡೈಮಂಡ್‌ಗಳು ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಇಷ್ಟವಾಗುತ್ತಿದೆ. ಅಂತಹ ಎಲ್ಲ ರೀತಿಯ ವಜ್ರಗಳ ಸಂಗ್ರಹವು ಸುಲ್ತಾನ್‌ನಲ್ಲಿ ಇದೆ. ಅಭಿವೃದ್ಧಿ ಹೊಂದಿರುವ ಉಡುಪಿಯಲ್ಲಿ ಸುಲ್ತಾನ್ ಗೋಲ್ಡ್ ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ ಆಭರಣಗಳನ್ನು ಒದಗಿಸುತ್ತಿದೆ. ಇಲ್ಲಿನ ಗ್ರಾಹಕ ಸ್ನೇಹಿ ಸಿಬ್ಬಂದಿಗಳಿಂ ದಾಗಿ ಸಂಸ್ಥೆಯು ಜನರಿಗೆ ಸಾಕಷ್ಟು ಹತ್ತಿರವಾಗಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೀಣಾ ಶೆಟ್ಟಿ ಬೆಲ್ಜಿಯಂ ಕಲೆಕ್ಷನ್, ಯಾಸ್ಮೀನ್ ಕೆ. ಅಂಬಾಗಿಲು ಫ್ರೆಂಚ್ ಕಲೆಕ್ಷನ್, ತೋಟ ಇರಾಮ್ ನಾಝ್ ಯು.ಎಸ್. ಕಲೆಕ್ಷನ್, ಸಾಫ್ಟ್‌ವೇರ್ ಇಂಜಿನಿಯರ್ ಸಂಧ್ಯಾ ಹರ್ಷಿತ್ ಶೆಟ್ಟಿ ಟರ್ಕಿಸ್ ಕಲೆಕ್ಷನ್, ಯಾಸ್ಮಿನ್ ಫೈರೋಝ್ ಟ್ರೆಡಿಷನ್ ಕಲೆಕ್ಷನ್ ಹಾಗೂ ಉಡುಪಿ ಸೈಲಾಸ್ ಇಂಟರ್‌ನ್ಯಾಶನಲ್ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ಅನ್ನಪೂರ್ಣ ರಾವ್ ಮಿಡ್ಲ್ ಈಸ್ಟ್ ಕಲೆಕ್ಷನ್‌ನ್ನು ಅನಾವರಣ ಗೊಳಿಸಿದರು.
ಸುಲ್ತಾನ್ ಗೋಲ್ಡ್ ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಉಡುಪಿ ಬ್ರಾಂಚ್ ಮೆನೇಜರ್ ಮನೋಜ್ ಎಂ.ಎಸ್., ಸೇಲ್ಸ್ ಮೇನೆಜರ್ ಅಬ್ದುಲ್ ವಾಹಿದ್ ಪಿ.ಎಂ., ಸುಲ್ತಾನ್ ಗ್ರೂಪ್ ಉಡುಪಿ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಮಾರ್ಕೆಟಿಂಗ್ ಮೆನೇಜರ್ ರಿಫಾ ಆಗಾ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ವಿಜೇತ ಶೆಟ್ಟಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಶ್ವದ ವಿವಿಧ ದೇಶಗಳ ವಿವಿಧ ಹೊಸ ಮಾದರಿಯ ಡೈಮಂಡ್‌ಗಳ ಸಂಗ್ರಹ ಈ ಪ್ರದರ್ಶನದಲ್ಲಿದೆ. ಪ್ರದರ್ಶನದಲ್ಲಿ ಐಷರಾಮಿ ವಜ್ರಾಭರಣಗಳ ಸಂಗ್ರಹ, ಸಾಲಿಟೈರ್ ಕಲೆಕ್ಷನ್, ಸಾಂಪ್ರದಾಯಿಕ ಶೈಲಿಯ ವಜ್ರಾಭರಣಗಳು, ತನ್ಮನಿಯಾ ಕಲೆಕ್ಷನ್, ಬ್ರೈಡಲ್ ವಜ್ರಾಭರಣ ಕಲೆಕ್ಷನ್, ಅನ್ಕಟ್ ಡೈಮಂಡ್, ರುಬಿ ಎಮೆರಾಲ್ಡ್ ಜೆಮ್ ಸ್ಟೋನ್ ಕಲೆಕ್ಷನ್ಗಳ ಸಂಗ್ರಹ ಇವೆ. ಪ್ರತಿ ಡೈಮಂಡ್ ಕ್ಯಾರೆಟ್ ಮೇಲೆ 8000ರೂ. ರಿಯಾಯಿತಿ ನೀಡಲಾಗುವುದು ಎಂದು ಉಡುಪಿ ಬ್ರಾಂಚ್ ಮೆನೇಜರ್ ತಿಳಿಸಿದ್ದಾರೆ.