ಸಮಾರಂಭಗಳಲ್ಲಿ ಮದ್ಯ ಸರಬರಾಜು ಹಾಗೂ ವಿತರಣೆಗೆ ಅಬಕಾರಿ ಇಲಾಖೆಯ ಅನುಮತಿ ಕಡ್ಡಾಯ

ಉಡುಪಿ, ಡಿ.21(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಎಲ್ಲಾ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೋಂ ಸ್ಟೇ, ರೆಸಾರ್ಟ್ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯು ಶುಕ್ರವಾರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಛೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಡಾ.ಬಾಲಕೃಷ್ಣ ಸಿ ಹೆಚ್, ಮುಂಬರುವ ಕ್ರಿಸ್‌ಮಸ್, ಹೊಸ ವರ್ಷ ಆಚರಣೆ ಮತ್ತು ಇತರೆ ಸಭೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಿದ್ದಲ್ಲಿ ಅಬಕಾರಿ ಇಲಾಖೆಯಿಂದ ಕಡ್ಡಾಯವಾಗಿ ಸಿಎಲ್-5 ಸನ್ನದುಗಳನ್ನು ಪಡೆದುಕೊಳ್ಳುವಂತೆ ಹಾಗೂ ಸಭೆ ಸಮಾರಂಭಗಳಲ್ಲಿ ಗೋವಾ ಮದ್ಯ/ತೆರಿಗೆ ರಹಿತ ಮದ್ಯ/ನಕಲಿ ಮದ್ಯ ಉಪಯೋಗಿಸದಂತೆ ಸೂಚನೆ ನೀಡಿದರು.

ಮನೆಗಳಲ್ಲಿ ನಡೆಯುವ ಮೆಹಂದಿ ಹಾಗೂ ಇತರೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಿದ್ದಲ್ಲಿ ಸಹ ಕಡ್ಡಾಯವಾಗಿ ಸಿಎಲ್-5 ಸನ್ನದು ಪಡೆದುಕೊಳ್ಳಬೇಕು, ತೆರಿಗೆ ಪಾವತಿಸಿದ ಮದ್ಯವನ್ನು ಉಪಯೋಗಿಸಬೇಕು ಎಂದರು. ಯಾವುದೇ ಅಬಕಾರಿ ಅಕ್ರಮಗಳು ಜರುಗಿದ್ದು ಕಂಡುಬಂದಲ್ಲಿ ಮೊಕದ್ದಮೆ ದಾಖಲಿಸಿ. ನಿಯಮಾನುಸಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಈ ನಿಟ್ಟಿನಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರವನ್ನು ಅತ್ಯಗತ್ಯವಾಗಿದ್ದು, ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ. 9449597104, ಉಡುಪಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು, ಮೊ.ನಂ 9482520693, ಕುಂದಾಪುರ ಉಪ ವಿಭಾಗ ಅಬಕಾರಿ ಉಪಅಧೀಕ್ಷಕರು, ಮೊ.ನಂ 9448921980, ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು ಮೊ.ನಂ.944883554, ಉಡುಪಿ ವಲಯ-2 ಅಬಕಾರಿ ನಿರೀಕ್ಷಕರು ಮೊ.ನಂ. 9731860034, ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು ಮೊ.ನಂ. 8892839092, ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು ಮೊ.ನಂ. 9731674117, ಜಿಲ್ಲಾತಂಡ ಅಬಕಾರಿ ನಿರೀಕ್ಷಕರು ಮೊ.ನಂ. 9035773785 ಅನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಬಿಂದುಶ್ರೀ ಪಿ. ಜಿಲ್ಲೆಯ ಅಬಕಾರಿಗಳು ಜಿಲ್ಲೆಯ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೊಂ ಸ್ಟೇ, ರೆಸಾರ್ಟ್ಗಳ ಮಾಲೀಕರು, ವ್ಯವಸ್ಥಾಪಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!