ಕಾಪು: ಕೊರಗ ಅಭಿವೃದ್ಧಿ ಸಂಘದ ಸಭೆ
ಕಾಪು ಡಿ.19(ಉಡುಪಿ ಟೈಮ್ಸ್ ವರದಿ): ಕೊರಗ ಅಭಿವೃದ್ಧಿ ಸಂಘದ ಸಭೆಯು ಸಂಘದ ಅಧ್ಯಕ್ಷರಾದ ಶೇಖರ್ ಎದ್ಮೇರು ರವರ ಅಧ್ಯಕ್ಷತೆಯಲ್ಲಿ ಶಿರ್ವದ ಪದವು ಕೊರಗರ ಗುಂಪಿನಲ್ಲಿ ನಡೆಯಿತು.
ಸಭೆಯಲ್ಲಿ ದರ್ಕಾಸು ಭೂಮಿಯ ಅರ್ಜಿ, ಯುವಜನರ ಉದ್ಯೋಗ ಮತ್ತು ಸಂಘಟನೆ ಬಲವರ್ಧನೆಯ ಕುರಿತು ಚರ್ಚೆ ನಡೆಸಲಾಯಿತು. ಹಾಗೂ ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಡಿ. 23 ರಂದು ಕಾಪು ತಶೀಲ್ದಾರರು ಮತ್ತು ಕಾಪು ಶಾಸಕರಿಗೆ ಮನವಿ ಸಲ್ಲಿಸುವುದಾಗಿ ನಿರ್ಧರಿಸಲಾಯಿತು. ಜೊತೆಗೆ ಈ ಬೇಡಿಕೆಗಳು ಈಡೇರದಿದ್ದಲ್ಲಿ ಕಾಪು ತಾಲೂಕು ಕಚೇರಿ ಎದುರು ಹಕ್ಕೊತ್ತಾಯ ಧರಣಿ ಸತ್ಯಾಗ್ರಹ ನಡೆಸುವುದಾಗಿ ನಿರ್ಧರಿಸಲಾಯಿತು.
ಇದೇ ವೇಳೆ ಸಭೆಯಲ್ಲಿ ಸ್ಥಗಿತ ಗೊಂಡಿರುವ ಮನೆ ನಿರ್ಮಾಣದ ಕೆಲಸಗಳು ಸಂಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ತಿಳಿಸುವುದಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ, ಒಕ್ಕೂಟದ ಕೋಶಾಧಿಕಾರಿ ವಿನಯ ಅಡ್ವೆ, ಒಕ್ಕೂಟದ ಪದಾಧಿಕಾರಿ ಭಾರತಿ ಕಾಪು, ಬಜಗೋಳಿ ಸಂಘದ ಸದಸ್ಯರಾದ ಅಮರ್ ಪಳ್ಳಿ, ಕೊಕ್ಕರ್ಣೆ ಸಂಘದ ಸದಸ್ಯರಾದ ಶೇಖರ ಕೆಂಜೂರು, ರಂಗ ಕುಂಜಿಗುಡ್ಡೆ, ವಿನಯ ಅಡ್ವೆ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.