ಬ್ರಹ್ಮಾವರ: ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ- ಸಮಾರೋಪ
ಬ್ರಹ್ಮಾವರ ಡಿ.11(ಉಡುಪಿ ಟೈಮ್ಸ್ ವರದಿ): ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ – ಕೇರಳ ಇದರ ವತಿಯಿಂದ ನಡೆದ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಆಂದೋಲನದ ಸಮರೂಪ ಸಮಾರಂಭವು ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ಬ್ರಹ್ಮಾವರ ಬಸ್ಸು ನಿಲ್ದಾಣದಿಂದ ಹಂದಾಡಿ ಗ್ರಾಮ್ ಪಂಚಾಯತ್ ವರೆಗೆ ಡೋಲು ವಾದನದ ಜೊತೆಗೆ ನಡೆದ ಕಾಲ್ನಡಿಗೆ ಜಾಥವನ್ನು ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಪೂಜಾರಿ ಅವರು ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಳಿಕ ಹಂದಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕಿನ ಉಪತಹಶೀಲ್ದಾರರಾದ ರಾಮಚಂದ್ರ ಅವರು ಮಾತನಾಡಿ ಸಂಘಟನೆಯ ಮುಖಾಂತರ ಕಚೇರಿಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಸಾಮಾಜಿಕರಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಾಗಿ ಸಲಹೆಯನ್ನು ನೀಡಿ ಕಾರ್ಯಕ್ರಮದ ಬಗ್ಗೆ ಹಿತನುಡಿಗಳನ್ನಾಡಿದರು.
ಈ ವೇಳೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ಅವರು ಮಾತನಾಡಿ, ಸುಮಾರು 35 ವರ್ಷಗಳ ಇತಿಹಾಸವನ್ನು ನೆನಪಿಸುತ್ತ ವಿಶ್ವಮಾನವ ಹಕ್ಕುಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸಮಸ್ಯೆ, ಆರೋಗ್ಯ , ದೌರ್ಜನ್ಯಗಳ ಕುರಿತಾಗಿ ಇತಿಹಾಸವನ್ನು ಪರಿಚಯಿಸಿದರು. ನಂತರದಲ್ಲಿ 1949 ರ ಡಿಸೆಂಬರ್ 10 ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುವುದರ ಮೂಲಕ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಅವುಗಳನ್ನು ರಕ್ಷಿಸುವ ಸಲುವಾಗಿ ಕಾನೂನುಗಳನ್ನು ಸಂವಿಧಾನವನ್ನು ನೀಡಿದ್ದು ಭಾರತ ಸಂವಿಧಾನದಲ್ಲಿ ಭಾರತ ಪ್ರಜೆ ಸಮಾನವಾಗಿ ಅವಕಾಶಗಳನ್ನು ಈ ಹಕ್ಕುಗಳನ್ನು ಪಡೆದಿರುತ್ತಾನೆ ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ಶೋಷಣೆಗಳನ್ನು ಮಾಡದೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಮಾನವಾಗಿ ಅನುಭವಿಸುವ ಹಕ್ಕನ್ನು ಪಡೆದಿರುತ್ತಾನೆ. ಅವುಗಳ ಚ್ಯುತಿಯಾದಲ್ಲಿ ಕಾನೂನುಗಳ ಮೊರೆಯನ್ನು ಕೂಡ ಹೋಗಬಹುದಾಗಿದೆ. ಅವುಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆಯನ್ನು ನೀಡುವುದರ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆಯನ್ನು ಮಾಡಬಹುದಾಗಿದೆ ಎಂಬುದನ್ನು ತಿಳಿಸಿದರು.
ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಜಾತಿ ಲಿಂಗ ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ದೌರ್ಜನ್ಯಗಳು ನಡೆದಲ್ಲಿ ಇವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ ಆಚರಿಸಲಾಗುತ್ತದೆ ಹಾಗೂ ಇವುಗಳನ್ನು ಪ್ರಚಾರಪಡಿಸುವುದಕ್ಕಾಗಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಮಾಜಿಕ ಸ್ಥರದಲ್ಲಿ ಅತ್ಯಂತ ಕೆಳಸಮುದಾಯವಾದ ಕೊರಗ ಸಮುದಾಯವು ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವಂತಹ ನೆಲೆಯಲ್ಲಿ ಬಂದು ತಲುಪಿದ್ದು, ಆದ್ಯಾಗೂ ಅನೇಕ ರೀತಿಯ ಸಮಸ್ಯೆಗಳನ್ನು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಅನುಭವಿಸುವಂತಾಗಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಲೈಂಗಿಕ ದೌರ್ಜನ್ಯದ ಅರಿವು ಮೂಡಿಸುವ ಅಗತ್ಯವಿದೆ. ಹೆಚ್ಚಿನ ಲೈಂಗಿಕ ಶೋಷಣೆ, ದೌರ್ಜನ್ಯಗಳು ಕುಟುಂಬದೊಳಗಿನ ಸದಸ್ಯರಿಂದಲೆ ಆಗಿದ್ದು, ಇವುಗಳನ್ನು ಪ್ರತಿಭಟಿಸುವಲ್ಲಿ ಅನೇಕ ಮಹಿಳೆಯರು ಮಹಿಳೆಯರು ಸೋಲನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಇಂತಹ ಸಮಸ್ಯೆಗಳ ರಕ್ಷಣೆಯನ್ನು ನೀಡುತ್ತವೆ ಅದರ ಸಲುವಾಗಿ ಹೆಚ್ಚಿನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಕುಟುಂಬದೊಳಗಿನಿಂದಲೇ ಅನೇಕ ರೀತಿಯ ದೌರ್ಜನ್ಯಗಳು,ಅತ್ಯಾಚಾರಗಳು ಕಾಣಬಹುದಾಗಿದೆ. ಅನೇಕ ಹೆಣ್ಣು ಮಕ್ಕಳು ಈ ರೀತಿಯ ಸಮಸ್ಯೆಗಳಿಗೆ ಪ್ರತಿಭಟಿಸುವಲ್ಲಿ ಸೋಲನ್ನು ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಕುಲನೆಗಳಲ್ಲಿ ಹಾಗೂ ಸಭೆ ಸಮಾರಂಭಗಳಲ್ಲಿ,ವಿಶುಮಾನವ ಹಕ್ಕುಗಳ ಪಕ್ಷ ಸರಣಿ ಕುರಿತದ ಬೀದಿ ನಾಟಕದ ಪ್ರದರ್ಶನವನ್ನು ಈ ರೀತಿಯಾಗಿ ಜನರಲ್ಲಿ ಅರಿವನ್ನು ಮೂಡಿಸಿದರು ಮೂಲಕ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಕೇವಲ ಅಜಲು ಪದ್ಧತಿ ಹಾಗೂ ಕುಡಿತಕ್ಕೆ ಒಳಗಾದ ಕೊರಗ ಸಮಾಜ ಸಂಘಟನೆಯ ಮಹತ್ವದಿಂದಾಗಿ ಅನೇಕ ರೀತಿಯ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮ ಸಂಸ್ಕೃತಿಯನ್ನು ಬಿಂಬಿಸುವುದರ ಮೂಲಕ ಅನೇಕ ರೀತಿಯ ಪ್ರದರ್ಶನಗಳನ್ನು ನೀಡಲು ಅವಕಾಶಗಳು ಸಿಕ್ಕಿವೆ.ಹಾಗಾಗಿ ಹೆಚ್ಚಿನ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂಬುದಾಗಿ ಕಾರ್ಯಕ್ರಮದ ಉದ್ದೇಶವನ್ನು ಹೇಳಿದರು.
ಇದೇ ವೇಳೆ ಬೊಗ್ರ ಕೊಕ್ಕರ್ಣೆ ಅವರು ಮಾತನಾಡಿ, 1998 ರಲ್ಲಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆಯ ಇತಿಹಾಸವನ್ನು ನೆನಪಿಸುತ್ತ ಸಾಮಾಜಿಕ ಪಿಡುಗುಗಳನ್ನು ಹೋರಾಟಗಳ ಮೂಲಕ ಹಾಗೂ ಪ್ರತಿಭಟನೆಗಳ ಮೂಲಕ ಹೋಗಲಾಡಿಸಬೇಕು. ಇಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಮೂಲಕ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವಲ್ಲಿ ನಿರತರಾಗಬೇಕು.ಅಧಿಕಾರಿಗಳ ಇಚ್ಛ ಶಕ್ತಿಯೊಂದಿಗೆ ಇಂತಹ ಅನೇಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬಹುದಾಗಿದೆ. ಅನೇಕ ಅಧಿಕಾರಿಗಳನ್ನು ನೆನಪಿಸುತ್ತ ಶಿಕ್ಷಣದಲ್ಲಿ ಹೆಚ್ಚಿನ ರೀತಿಯಲ್ಲಿ ಸಾಧನೆ, ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಟ ಪ್ರತಿಭಟಿಸಲು ಸಾಧ್ಯವಾಗಿದೆ. ಸಂಘಟನೆಯು ಹೆಚ್ಚಿನ ಅವಕಾಶಗಳಿಗೆ ಎಡೆ ಮಾಡಿಕೊಟ್ಟಿದೆ ಸಾಮಾಜಿಕವಾಗಿ ನಾವು ಸಮಾಜದೊಂದಿಗೆ ಹೊಂದಾಣಿಕೆ ಪಡೆಯುವುದಕ್ಕೆ ಸಾಧ್ಯವಾಗಿದೆ. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಒಕ್ಕೂಟದ ಖಜಾಂಚಿಯಾದ ವಿನಯ ಅಡ್ವೆ ಇವರು ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯದ ವಿರುದ್ಧ ರಕ್ಷಣೆ ಹಾಗೂ ಅನೇಕರಿಗೆ ಶೋಷಣೆಗಳು ಆದರು ಕೂಡ ಅವುಗಳನ್ನು ಹೇಳುವಂತಹ ಪರಿಸ್ಥಿತಿಯಲ್ಲಿರುವುದಿಲ್ಲ ಹೆಚ್ಚಾಗಿ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ ಹಾಗೂ ಇವುಗಳನ್ನು ಸಾಮಾಜಿಕ ಸ್ತರದಲ್ಲಿ ಸಮಾಜದಲ್ಲಿ ಅವುಗಳನ್ನು ಪ್ರತಿಭಟಿಸಲು ಅಥವಾ ಅವುಗಳನ್ನು ಪ್ರತಿಬಿಂಬಿಸುವಲ್ಲಿ ವಿಫಲನಾಗುತ್ತಿದ್ದಾರೆ ಇಂತಹ ಅನೇಕ ಉದಾಹರಣೆಗಳು ಅನೇಕ ರೀತಿಯ ಸಮಸ್ಯೆಗಳನ್ನು ಈ ವಿಶ್ವಮಾನವ ಹಕ್ಕುಗಳ ಮೂಲಕ ಪ್ರಕರಣಗಳನ್ನು ಬಗೆಹರಿಸುವಲ್ಲಿ ಹೆಚ್ಚಿನ ರೀತಿಯ ಮಾಹಿತಿಯನ್ನು ನೀಡಬೇಕಾಗಿದೆ. ಹಾಗೂ ವಿಶ್ವಮಾನವ ಹಕ್ಕುಗಳ ಪಕ್ಷಚರಣೆಯ ಅಂಗವಾಗಿ ಗ್ರಾಮ್ ಪಂಚಾಯತ್ಗಳಲ್ಲಿ ಸಭೆ ಸಮಾರಂಭಗಳನ್ನು ಮಾಡುವುದರ ಮೂಲಕ ಇದರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುತ್ರನ್ ಹೆಬ್ರಿ, ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹಿಂಪೂರ್, ವಿಮಲಾ ಕಲ್ತೂರು, ದಿವಾಕರ್ ಕಲ್ತೂರು ಹಾಗೂ ಕೊರಗ ಸಮುದಾಯದ ಬಾಂಧವರು ಉಪಸ್ಥಿತರಿದ್ದರು.