ಉಡುಪಿ: ನಮತ್ರಾ ಹೆಗಡೆರಿಗೆ ಚಂಡೀಗಡ ವಿ.ವಿಯಿಂದ ಡಾಕ್ಟರೇಟ್ ಗೌರವ
ಉಡುಪಿ ನ.25 : ಬೆಂಗಳೂರಿನ ಶಂಕರ ಕಾಲೇಜ್ ಆಫ್ ಒಪ್ಪೋಮೆಟ್ರಿಯಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ಉಡುಪಿಯ ನಮತ್ರಾ ಹೆಗಡೆ ಅವರ ಸಂಶೋಧನಾತ್ಮಕ ಪ್ರಬಂಧಕ್ಕೆ ಚಂಡೀಘಡದ ಚಿತ್ಕಾರಾ ವಿವಿ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ನಮತ್ರಾ ಹೆಗಡೆ ಅವರು ಡಾ.ಕಲಿಕಾ ಬಂದಾಮ್ವರ್ ಮಾರ್ಗದರ್ಶನದಲ್ಲಿ ಸಿದ್ಧ ಪಡಿಸಿದ ‘ವರ್ಚುವಲ್ ರಿಯಾಲಿಟಿ ಬೇಸ್ಡ್ ಬೈನೋಕ್ಯುಲರ್ ವಿಷನ್ ಥೇರೋಪಿ ಫಾರ್ ಮ್ಯಾನೇಜ್‌ಮೆಂಟ್ ಆಫ್ ಆಂಬ್ಲಿಯೋಪಿಯಾ’ ಎಂಬ ಪ್ರಬಂಧಕ್ಕೆ
ನಮ್ರತಾ ಹೆಗಡೆ ಅವರು ಕಣ್ಣಿನ ಒಂದು ವಿಶಿಷ್ಟ ಸಮಸ್ಯೆಯಾದ ಆಂಬ್ಲಿಯೋಪಿಯಾ (ಲೇಜಿಐ) ಸಮಸ್ಯೆಯನ್ನು ಪರಿಣಾಮ ಕಾರಿಯಾಗಿ ಪರಿಹರಿಸಲು ಮೊಬೈಲ್‌ನ್ನು ಬಳಸಿಕೊಂಡು ಮನೆಯಲ್ಲಿಯೇ ಕುಳಿತು ಚಿಕಿತ್ಸೆ ಪಡೆಯುವ ನವೀನ ತಂತ್ರಜ್ಞಾನವನ್ನು ಅವಿಷ್ಕಾರ ಮಾಡಿದ್ದಾರೆ. ಕಣ್ಣಿನ ದೃಷ್ಟಿ ಸಂಶೋಧನಾ ಕ್ಷೇತ್ರದಲ್ಲಿ ಇದೊಂದು ಮಹತ್ವದ ಸಂಶೋಧನೆಯನ್ನು ಭಾರತದ ಉದ್ಯಮ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಉತ್ತಮ ಸಂಶೋಧನೆ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.
ನಮ್ರತಾ ಹೆಗಡೆ ಅವರು ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿವೃತ್ತ ನಿರ್ದೇಶಕ ಡಾ.ಎಂ.ಆರ್. ಹೆಗಡೆ ಮತ್ತು ಕಮಲಾ ಎಂ. ಹೆಗಡೆ ದಂಪತಿಗಳ ಪುತ್ರಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆ ಕುಮಟ ತಾಲೂಕಿನ ಹೊಲನಗದ್ದೆ ಗ್ರಾಮದ ಹರ್ಷ ಹೆಗಡೆ ಅವರ ಪತ್ನಿಯಾಗಿದ್ದಾರೆ.