ಕೆಎಂಸಿಯ ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ ಮತ್ತು ಕಿಮೊಥೆರಪಿ ಡೇ ಕೇರ್ ಕೇಂದ್ರದ ಉದ್ಘಾಟನೆ

ಮಣಿಪಾಲ ನ.21(ಉಡುಪಿ ಟೈಮ್ಸ್ ವರದಿ): ಕೆಎಂಸಿಯ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಬ್ಲಾಕ್‌ನಲ್ಲಿ ಹೊಸದಾಗಿ ನವೀಕರಿಸಿದ ವೈದ್ಯಕೀಯ ಆಂಕೊಲಾಜಿ ಹೊರರೋಗಿ ವಿಭಾಗ (OPD) ಮತ್ತು ಕೀಮೋಥೆರಪಿ ಡೇ ಕೇರ್ ಕೇಂದ್ರ ಇಂದು  ಉದ್ಘಾಟನೆಗೊಂಡಿತು.

ನವೀಕರಿಸಿದ ಸೌಲಭ್ಯಗಳು ರೋಗಿಗಳು ಮತ್ತು ಸಂದರ್ಶಕರಿಗೆ ಆರಾಮದಾಯಕ ಅನುಭವವನ್ನು ಖಾತ್ರಿಪಡಿಸುವ, ಉತ್ತಮವಾಗಿ ವಿನ್ಯಾಸಗೊಳಿಸಲಾದ ಕಾಯುವ ಕೋಣೆಯೊಂದಿಗೆ ಆರಾಮದಾಯಕ ಸಮಾಲೋಚನೆ ಸೌಲಭ್ಯವನ್ನು ಒಳಗೊಂಡಿವೆ. ಡೇ ಕೇರ್ ಕೇಂದ್ರವು  ಕೀಮೋಥೆರಪಿ ಮತ್ತು ಇತರ ವಿಶೇಷ ಆಂಕೊಲಾಜಿ ಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಸುಧಾರಿತ ಡೇ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅತ್ಯಾಧುನಿಕ ವೈದ್ಯಕೀಯ ಆರೈಕೆಯನ್ನು ಒದಗಿಸಲು ಮತ್ತು ರೋಗಿಗಳಿಗೆ ಉತ್ತಮ ಸೌಕರ್ಯವನ್ನು ಹೆಚ್ಚಿಸಲು ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು.

ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಉಪ ಕುಲಪತಿ ಡಾ. ಶರತ್ ಕೆ. ರಾವ್, ಅವರು ನವೀಕರಿಸಿದ  ಹೊರ ರೋಗಿ ವಿಭಾಗವನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ,  ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಸಿ ಓ ಓ  ಡಾ. ಆನಂದ್ ವೇಣುಗೋಪಾಲ್ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ, ಕೆ ಎಂ ಸಿ ಮಣಿಪಾಲದ ಸಹ ಡೀನ್ ಮತ್ತು  ಮಣಿಪಾಲ್ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ (MCCCC) ನ ಸಂಯೋಜಕರಾದ ಡಾ. ನವೀನ್ ಸಾಲಿನ್ಸ್, ವೈದ್ಯಕೀಯ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕರುಗಳಾದ  ಡಾ. ಕಾರ್ತಿಕ್ ಉಡುಪ ಮತ್ತು ಡಾ. ಅನಂತ್ ಪೈ  ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!