ಉಡುಪಿ: ಸಂಘಟನೆ ಕಟ್ಟಿ, ಸಂವಿಧಾನದ ಆಶಯ ಇಡೇರಿಸಿ ; ಸುಂದರ ಮಾಸ್ತರ್ ಕರೆ
ಉಡುಪಿ ನ.18(ಉಡುಪಿ ಟೈಮ್ಸ್ ವರದಿ): ದಲಿತ ಸಂಘರ್ಷ ಸಮಿತಿ ಆರೂರು ಗ್ರಾಮ ಶಾಖೆಯ ಉಧ್ಘಾಟನಾ ಸಮಾರಂಭ ಬ್ರಹ್ಮಾವರದ ಆರೂರಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ ದ.ಸಂ.ಸ.ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರುಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಫ್ರೋಫೇಸರ್ ಕ್ರಷ್ಣಪ್ಪ ಆವರು ಸ್ಥಾಪಿಸಿದ ಈ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯ ಮೂಲೆ ಮೂಲೆಗೂ ವಿಸ್ತರಿಸುವ ಕೆಲಸ ನಾವು ಮಾಡಬೇಕು. ಈ ಸಂಘಟನೆಯ ಮೂಲಕ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಪ್ರಯೋಜನ ತಲುಪುವಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಅವರು, ಹಳ್ಳಿಗಳಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ನಮಗೆ ದಕ್ಕಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳೋಣ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲೂ ಇರುವ ಏಕೈಕ ಸಂಘಟನೆ ಅಂಬೇಡ್ಕರ್ ವಾದ , ನಾವೆಲ್ಲರೂ ಇಲ್ಲಿ ಅಂಬೇಡ್ಕರ್ ಋಣವನ್ನು ತೀರಿಸಲು ಬಂದಿದ್ದೇವೆ.ಹೊಟ್ಟೆ ಪಾಡಿಗೆ ನಮಗೆ ಓಳ್ಳೆಯ ಉಧ್ಯೋಗ ಇದೆ , ಆದರೆ ಧ್ವನಿ ಇಲ್ಲದ ನಮ್ಮ ಶೋಷಿತ ಸಮೂದಾಯದವರಿಗೆ ಧ್ವನಿಯಾಗಲು ಹಳ್ಳಿ ಹಳ್ಳಿಗಳಲ್ಲೂ ದ.ಸಂ.ಸ.ಶಾಖೆಗಳನ್ನು ತೆರೆಯುತ್ತಿದ್ದೇವೆ ಎಂದರು.
ಬ್ರಹ್ಮಾವರ ಪೋಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶಾಂತರಾಜ್ ರವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆ ಆದ ಆರೂರು ಗ್ರಾಮ ಶಾಖೆಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಲಾಯಿತು.ಆರೂರು ಶಾಖೆಯ ಪ್ರಧಾನ ಸಂಚಾಲಕರಾಗಿ ನರಸಿಂಹ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಥಿಗಳಾಗಿ ಆರೂರು ಬಬ್ಬುಸ್ವಾಮಿ ದೇವಸ್ಥಾನದ ಮೋಕ್ತೇಸರರಾದ ಅರುಣ್ ಕುಮಾರ್ ಶೆಟ್ಟಿ , ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ರಾವ್ , ಗ್ರಾಮ ಪಂಚಾಯತ್ ಸಧಸ್ಯರಾದ ಪಾರ್ವತಿ , ಮಾಜೀ ಪಂಚಾಯತ್ ಅಧ್ಯಕ್ಷರಾದ ರಾಜೀವ ಕುಲಾಲ್ , ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ , ಸುರೇಶ ಹಕ್ಲಾಡಿ , ಅಣ್ಣಪ್ಪ ನಕ್ರೆ , ರಾಜೇಂದ್ರ ನಾಥ್ , ಮಂಜುನಾಥ ಹಳಗೇರಿ , ಭಾಸ್ಕರ ಮಾಸ್ಟರ್ , ಕುಮಾರ್ ಕೋಟ , ಶ್ರೀಧರ್ ಕುಂಜಿಬೆಟ್ಟು , ತಾಲೂಕು ಪದಾಧಿಕಾರಿಗಳಾದ ಶಂಕರ್ ದಾಸ್ ಚೆಂಡ್ಕಳ , ವಡ್ಡರ್ಸೆ ಶ್ರೀನಿವಾಸ, ವಿಠಲ ಉಚ್ಚಿಲಾ,ಪ್ರಶಾಂತ ಬಿರ್ತಿ, ವಿಜಯ ಗಿಳಿಯಾರು , ಶಿವಾನಂದ ಬಿರ್ತಿ , ಸುಧಾಕರ ಮಾಸ್ಟರ್ ಗುಜ್ಜರ್ ಬೆಟ್ಟು , ಹರೀಶ್ಚಂದ್ರ ಬಿರ್ತಿ ಮೊದಲಾದವರು ಆಗಮಿಸಿದ್ದರು.