ಉಡುಪಿ: ಆದರ್ಶ ಆಸ್ಪತ್ರೆಯ: ನ್ಯೂರೋ ಸರ್ಜರಿಯಲ್ಲಿ ಉನ್ನತ ಗುಣಮಟ್ಟದ ಸೇವೆ
ಉಡುಪಿ ನ.18: ನಗರದ ಪ್ರಸಿದ್ಧ ಆದರ್ಶ ಆಸ್ಪತ್ರೆಯ ನ್ಯೂರೋ ಸರ್ಜರಿ ವಿಭಾಗವು ಪರಿಣಿತ ವೈದ್ಯರು ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಗುಣಮಟ್ಟದ ಸೇವೆ ನೀಡಲು ಸಜ್ಜಾಗಿದೆ.
2010ರಲ್ಲಿ ಖ್ಯಾತ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ| ಎ. ರಾಜಾ ಅವರಿಂದ ಸ್ಥಾಪಿಸಲ್ಪಟ್ಟ ಈ ವಿಭಾಗವು ಈಗ 20 ವರ್ಷಗಳ ಸೇವಾನುಭವ ಹೊಂದಿರುವ ಹಾಗೂ ಡಾ। ರಾಜಾ ಅವರ ಶಿಷ್ಯರೆಂದು ಪ್ರಸಿದ್ದರಾದ ಡಾ| ಜಸ್‌ಪ್ರೀತ್ ಸಿಂಗ್ ದಿಲ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.
ಮೆದುಳಿನ ಅನ್ಯೂರಿಸಂ ಹಾಗೂ ಎಂಡೋವಾಸ್ಕ್ಯುಲರ್ ಈ ಎರಡೂ ಚಿಕಿತ್ಸೆಗಳನ್ನು ನಡೆಸುವ ಸಮರ್ಥ ವೈದ್ಯರಾದ ಅವರು ಈಗಾಗಲೇ ಸುಮಾರು ಸಾವಿರಕ್ಕೂ ಅಧಿಕ ಅನ್ಯೂರಿಸಂ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ಈ ವಿಭಾಗಕ್ಕೆ 12 ವರ್ಷಗಳ ಸೇವಾನುಭವ ಹೊಂದಿ ರುವ ಬೆನ್ನುಹುರಿ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಡಾ| ರಾಜೇಶ್ ಸೇರ್ಪಡೆಗೊಂಡಿದ್ದು, ನಾಯರ್, ಡಾ. ಜಸ್‌ಪ್ರೀತ್ ಸಿಂಗ್ ದಿಲ್ ಅವರಿಗೆ ಸಹಕಾರ ನೀಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್ ಚಂದ್ರಶೇಖರ್ ಅವರು, ನ್ಯೂರೋ ಸರ್ಜರಿ ವಿಭಾಗವು ತಲೆಗಾಯ, ಬೆನ್ನುಹುರಿ ಆಘಾತ, ಮೆದುಳಿನ ಗಡ್ಡೆ ಮೆದುಳಿನ ನಾಳಗಳ ರೋಗಗಳು, ಮೆದುಳಿನ ರಕ್ತಸ್ರಾವ, ಮೆದುಳಿನ ಸ್ಟೋಕ್, ರಕ್ತ ಹೆಪ್ಪುಗಟ್ಟುವಿಕೆ, ಎಪಿಲೆಪ್ಸಿ ಮೊದಲಾದ ನರಗಳಿಗೆ ಸಂಬಂಧಿಸಿದ ರೋಗಗಳಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಚಿಕಿತ್ಸೆ ನೀಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.