ಉಡುಪಿ: “ಕಾಂಚನ ಗ್ರಾಮೀಣ ಮಹೋತ್ಸವ” ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ
ಮಂಗಳೂರು, ನ.16 : ಪ್ರಸಿದ್ಧ ವಾಹನ ಮಾರಾಟ ಸಂಸ್ಥೆಯಾದ ಕಾಂಚನ ಹ್ಯುಂಡೈನ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ನ.15 ರಂದು ಆರಂಭಗೊಂಡಿದ್ದು, ನ.17 ರವರೆಗೆ ನಡೆಯಲಿದೆ. ಉಡುಪಿಯ ಬೀಡಿನಗುಡ್ಡೆ ಗ್ರೌಂಡ್, ಹೆಬ್ರಿಯ ಗ್ರಾಮ ಪಂಚಾಯತ್ ಆಫೀಸ್‌ನ ಎದುರುಗಡೆ, ಕುಂದಾಪುರದ ಕುಂದೇಶ್ವರ ದೇವಸ್ಥಾನದ ಎದುರುಗಡೆ, ರಾಧಾ ಮೆಡಿಕಲ್ಸ್ ಹತ್ತಿರ ಮತ್ತು ಬೈಂದೂರಿನ ಕರ್ಣಾಟಕ ಬ್ಯಾಂಕ್‌ನ ಬಳಿ ಆಯೋಜಿಸಲಾಗಿದ್ದು, ಉಡುಪಿ, ಕುಂದಾಪುರ ಮತ್ತು ಕಾರ್ಕಳ ಆಸುಪಾಸಿನ ಹ್ಯುಂಡೈ ಮತ್ತು ಇತರ ಕಾರು ಗ್ರಾಹಕರು ಈ ಬೃಹತ್ ಮೇಳದ ಕೊಡುಗೆಗಳನ್ನು ಪಡೆಯಬಹುದಾಗಿದೆ.
ಮೇಳವನ್ನು ಬ್ಯಾಂಕ್ ಆಫ್ ಬರೋಡದ ಉಡುಪಿಯ ರೀಜನಲ್ ಮ್ಯಾನೇಜರ್ ಪಿ.ವಿದ್ಯಾಧರ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಶಿಫಾಲಿ ಶೆಟ್ಟಿ ಮಾರ್ಕೆಟ್ ಮ್ಯಾನೇಜರ್ ಅವನೀಶ್ ಭಟ್, ಉದ್ಯಮಿ ಅತ್ರಾಡಿ ವಿಶ್ವನಾಥ್ ಹೆಗ್ಡೆ ಕಾಂಚನಾ ಹೂಂಡ್ಯಾ ಆಡಳಿತ ಸಿಬಂದಿ ಉಪಸ್ಥಿತರಿದ್ದರು.
ಕೊಡುಗೆಗಳು: ವೆನ್ಯೂ – 60,000 ರೂ. ಎಕ್ಸ್‌ಟರ್ 30,000 ರೂ., ಐ20 – 55,000 ರೂ., ಗ್ರಾಂಡ್ ಐ10 ನಿಯೋಸ್ 58,000 ರೂ., ಔರಾ 43,000 ರೂ., ವೆನ್ಯೂ ಎನ್‌ಲೈನ್ 60,000 ರೂ., ವರ್ನಾ – 70,000 ರೂ.ವರೆಗೆ ರಿಯಾಯಿತಿ ಇದೆ.
ಕಾಂಚನಾ ಹ್ಯುಂಡೈ 2006ರಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾದ ಕಾರುಗಳ ಅಧಿಕೃತ ಡೀಲರ್ ಆಗಿ ಕರಾವಳಿ ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿ ಕಳೆದ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯು ಪ್ರತಿ ವರ್ಷ 3,000ಕ್ಕೂ ಮಿಗಿಲಾಗಿ ಹೂಂಡ್ಯಾ ಕಾರುಗಳನ್ನು ಮಾರಾಟ ಮಾಡುತ್ತಿದೆ. ಉಡುಪಿಯಲ್ಲಿ ಮುಖ್ಯ ಕಚೇರಿ, ಮಂಗಳೂರಿನಲ್ಲಿ ಕಾರ್ಪೋರೆಟ್ ಕಚೇರಿ ಮತ್ತು ಪುತ್ತೂರು, ಕುಂದಾಪುರ, ಶಿರಸಿ, ಕಾರವಾರ, ಕಾರ್ಕಳ, ಕುಮಟಾ ಹಾಗೂ ಸುರತ್ಕಲ್‌ನಲ್ಲಿ ಸುಸಜ್ಜಿತ ಮಳಿಗೆ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ಹೊಂದಿದೆ.