ಉಡುಪಿ: ಲಯನ್ಸ್ ಕ್ಲಬ್‌ನಿಂದ ದಿನೇಶ್ ಬಾಂಧವ್ಯರಿಗೆ ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ ನ.07(ಉಡುಪಿ ಟೈಮ್ಸ್ ವರದಿ): ಲಯನ್ಸ್ ಕ್ಲಬ್ ಉಡುಪಿ ಇದರ ವತಿಯಿಂದ ಕೊಡಮಾಡುವ 2024ನೇ ಸಾಲಿನ ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಸಮಾಜ ಸೇವಕ ದಿನೇಶ್ ಬಾಂಧವ್ಯ ಅವರಿಗೆ ನೀಡಿ ಗೌರವಿಸಲಾಗಿದೆ.

ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿನೇಶ್ ಬಾಂಧವ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಅವರು, ರಕ್ತದಾನದ ಮಹತ್ವ ಮತ್ತು ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದೇ ವೇಳೆ ನೂತನವಾಗಿ ಸರಕಾರದಿಂದ ನೇಮಕಗೊಂಡ ಹೋಮ್ ಗಾರ್ಡ್‌ ಕಮಾಂಡೆಟ್ ಲ. ರೋಶನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಹಾಗೂ ಇತರ ಯಾವುದೇ ನೇಮಕಾತಿ ಸಂದರ್ಭದಲ್ಲಿ ಮೊದಲ ಆದ್ಯತೆಯನ್ನು ಹೋಂ ಗಾರ್ಡ್ಸ್‌ಗೆ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಲಯನ್ಸ್ ಕ್ಲಬ್‌ನ ವತಿಯಿಂದ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ಹೋಂ ಗಾರ್ಡ್ಸ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ಸಹಾಯ ಮಾಡುವ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಲೂಯಿಸ್ ಲೋಬೋ, ಮಾಜಿ ಜಿಲ್ಲಾ ಗವರ್ನರ್ ಡಾ.ರವೀಂದ್ರನಾಥ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಭಟ್ ಎಂ.ಡಿ, ಕೋಶಾಧಿಕಾರಿ ಲೆಸ್ಲಿ ಕರ್ನೇಲಿಯೊ, ಪ್ರಾಂತೀಯ ಅಧ್ಯಕ್ಷ ಮೆಲ್ವಿನ್ ಅರಾಹ್ನಾ, ಲ್ಯಾಸೆಟ್ ಕರ್ನೆಲಿಯೋ, ಶ್ರೀಲಕ್ಷ್ಮಿ ಭಟ್ , ಲೆನನ್ ಕರ್ನೇಲಿಯೊ, ಅವನಿ ಕಿಣಿ, ಅಕ್ಷೋಭ್ಯ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಹಣತೆ ಹಚ್ಚಿ, ಸುಡುಮದ್ದುಗಳನ್ನು ಸಿಡಿಸಿ ದೀಪಾವಳಿಯ ಸಂಭ್ರಮಾಚರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!