ಉಡುಪಿ: ನ.11 ರಂದು ರಾಜ್ಯಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣ

ಉಡುಪಿ ನ.07(ಉಡುಪಿ ಟೈಮ್ಸ್ ವರದಿ): ಉಡುಪಿ ಮತ್ತು ದಕ್ಷಿಣ ಕನ್ನಡದ ಐ.ಸಿ.ಎಸ್.ಇ. ಹಾಗೂ ಸಿ.ಬಿ.ಎಸ್.ಇ. ಶಾಲೆಗಳ ಒಕ್ಕೂಟ ( AICS) ಮತ್ತು ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ  ನ.11 ರಂದು ರಾಜ್ಯಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣವನ್ನು ಬ್ರಹ್ಮಾವರದ ಎಸ್ಎಂಎಸ್ ಕಮ್ಯುನಿಟಿ ಹಾಲ್ ನಲ್ಲಿ ನಡೆಯಲಿದೆ  ಎಂದು ಬ್ರಹ್ಮಾವರ ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆಯ ಅಭಿಲಾಷ ತಿಳಿಸಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಾನವತೆಯ ಔನ್ನತ್ಯಕ್ಕಾಗಿ ಶಿಕ್ಷಣ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಸಂಕಿರಣವನ್ನು ಬ್ರಹ್ಮಾವರದ ಓ.ಎಸ್.ಸಿ. ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಎಮ್.ಸಿ. ಮಥಾಯ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಅಜೀಮ್ ಪ್ರೇಮ್ಜಿ ಫೌಂಡೇಶನ್ ನ ಪ್ರೊ. ಗಿರಿಧ‌ರ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದರು.

ಈ ವಿಚಾರ ಸಂಕಿರದಲ್ಲಿ ರಾಜ್ಯದ ವಿವಿಧ ಭಾಗದ ಸುಮಾರು 300 ಶಿಕ್ಷಕರು, ಪ್ರಾಂಶುಪಾಲರು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಹಾಗೂ ಪೂನಾ ಸಿಂಬಯೋಸಿಸ್ ನ ರಿಸರ್ಚ್ ಪ್ರೊ. ನೀತಾ ಇನಾಮ್ದಾರ್, ಮಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರೊಫೆಸರ್ ರಾಜಾರಾಮ್ ತೋಳ್ಪಾಡಿ, ಶಿವಮೊಗ್ಗದ ಮನಶ್ಯಾಸ್ತ್ರಜ್ಞರಾದ ಡಾ. ಅರ್ಚನಾ ಭಟ್, ಉಡುಪಿ ಡಯಟ್ ನ ಪ್ರಾಂಶುಪಾಲ ಅಶೋಕ್ ಕಾಮತ್, ಮಾಹೆಯ ಶುಭಂಕರ್ ಪೌಲ್, ಶಿಕ್ಷಣ ತಜ್ಞರಾದ ಮೆರಿಡಾ ಡಿ ಅಲ್ಮೇಡಾ, ಪ್ರೊ. ಮಾಥ್ಯೂ ಸಿ. ನಯನನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ‌. ಬಳಿಕ ಕನ್ನಡ ಕೀಲಿಮಣೆ ತಜ್ಞ ಪ್ರೊ. ಕೆ.ಪಿ.ರಾವ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!