ಉಡುಪಿ: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ- ಬ್ಯಾಂಕ್ ವ್ಯವಸ್ಥಾಪಕನಿಗೆ 14 ಲ.ರೂ. ವಂಚನೆ

ಉಡುಪಿ ನ.05(ಉಡುಪಿ ಟೈಮ್ಸ್ ವರದಿ): ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭಾಂಶ ಪಡೆಯುವ ಆಸೆ ತೋರಿಸಿ ಅಜೆಕಾರಿನ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರಿಂದ 14.00 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಜೆಕಾರಿನ ಬ್ಯಾಂಕ್‌ವೊಂದರಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿರುವ ಪವನ್ ಕುಮಾರ್ ಸುಬ್ಬ ರೆಡ್ಡಿ ಅವರನ್ನು ಅಪರಿಚಿತ ವ್ಯಕ್ತಿ C22 Investment Alliance Trading ಎಂಬ  WhatsApp ಗ್ರೂಪ್‌ಗೆ ಸೇರಿದ್ದು, ಬಳಿಕ  ಈ  WhatsApp ಗ್ರೂಪ್‌ನಲ್ಲಿ ಅಪರಿಚಿತ ವ್ಯಕ್ತಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭಾಂಶ ಗಳಿಸುವ ಬಗ್ಗೆ ಮಾಹಿತಿ ನೀಡಿದ್ದಾನೆ‌. ಅಲ್ಲದೆ, ಈ ವಿಚಾರವಾಗಿ ನಂಬಿಸಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ Causeway App ಮುಖೇನಾ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾನೆ.  ಇದನ್ನು ನಂಬಿದ ಪವನ್ ಅವರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 14,00,000/- ಹಣವನ್ನು  ಹೂಡಿಕೆ ಮಾಡಿದ್ದಾರೆ. ಆದರೆ ಆ ಬಳಿಕ ಆರೋಪಿಗಳು  ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ನೀಡದೇ ವಂಚಿಸಿದ್ದಾರೆ ಎಂಬಿದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ  ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!