ಶಿಕ್ಷಕರಲ್ಲಿ ಜ್ಞಾನ ವರ್ಜನೆ ಮತ್ತು ಕಲಿಕಾ ಸಾಮರ್ಥ್ಯ ವೃದ್ಧಿಗೊಳ್ಳಬೇಕು : ಪ್ರೊಫೆಸರ್ ಪಿ. ಎಲ್. ಧರ್ಮ

ಉಡುಪಿ ಅ.25(ಉಡುಪಿ ಟೈಮ್ಸ್ ವರದಿ): ಶಿಕ್ಷಕರು ತಮ್ಮ ಜ್ಞಾನ ಮತ್ತು ಕಲಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊಫೆಸರ್. ಪಿ.ಎಲ್. ಧರ್ಮ ಅವರು ಹೇಳಿದ್ದಾರೆ.

ವಾಣಿಜ್ಯ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ  ಆಯೋಜಿಸಿದ “ಎಂ.ಕಾಂ. ಕೋರ್ಸು”  ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಆಸಕ್ತಿದಾಯಕವಾಗುವಂತೆ ಆಧುನಿಕ ಪಾಠ ಪ್ರವಚನಗಳನ್ನು ಬೋಧಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಮತ್ತು ಪ್ರಾಕ್ಟಿಕಲ್ ಓರಿಯೆಂಟೆಡ್ ಮಾದರಿಯಲ್ಲಿ ತರಗತಿಗಳನ್ನು ನಡೆಸಬೇಕು. ನಿರಂತರ ಓದುವಿಕೆ ಮತ್ತು ಅಪ್ಡೇಟ್ ಆಗುವ ಮೂಲಕ 21ನೇ ಶತಮಾನದ ವೇಗಕ್ಕೆ ಅನುಗುಣವಾಗಿ ಕಲಿಕಾ ಶಕ್ತಿಯನ್ನು ಹೆಚ್ಚಿಸಬೇಕು. ಸ್ನಾತಕೋತ್ತರ ಕೋರ್ಸಗಳಲ್ಲಿ ಪಠ್ಯಕ್ರಮಗಳನ್ನು  ಪುನರ್ ವಿಮರ್ಶೆಗೊಳಿಸಬೇಕು ಎಂದರು.

ಕಾರ್ಯಗಾರದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು.

ಕಾರ್ಯಗಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜಿನ ಎಂ. ಕಾಂ. ಕೋರ್ಸುಗಳ ಸಂಯೋಜಕರು ಮತ್ತು ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಐವತ್ತಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಕೆ. ರಾಜು ಮೊಗವೀರ ಮತ್ತು ಐಕ್ಯುಎಸಿಯ  ನಿರ್ದೇಶಕ ಪ್ರೊ. ಮೋನಿಕ ಸದಾನಂದ, ವಾಣಿಜ್ಯ ವಿಭಾಗದ ಪ್ರೊಫೆಸರ್.  ವೈ. ಮುನಿರಾಜು, ಪ್ರೊಫೆಸರ್. ಈಶ್ವರ ಪಿ.  ಪ್ರೊಫೆಸರ್.  ವೇದವ ಪಿ  ಮತ್ತು ಪ್ರೊಫೆಸರ್.  ಪರಮೇಶ್ವರ, ಡಾ. ದಿನಕರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!