ಉಡುಪಿ : ವಿಶೇಷ ಫೋಲೀಸ್ ಠಾಣೆಗಾಗಿ ದ.ಸಂ.ಸ. ಮನವಿ

ಉಡುಪಿ ಅ.23 (ಉಡುಪಿ ಟೈಮ್ಸ್ ವರದಿ):  ದೇಶಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ದಲಿತರ ಮೇಲಿನ ಧೌರ್ಜನ್ಯ ಕ್ಕೆ ಶೀಘ್ರ ಇತ್ಯರ್ಥ ಕಂಡುಕೊಳ್ಳುವಂತಾಗಲು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ದಲಿತ ಧೌರ್ಜನ್ಯ ಕೇಸಿಗೆ ವಿಶೇಷ ಪತ್ಯೇಕ ಪೋಲಿಸ್ ಠಾಣೆಗಳನ್ನು ತೆರೆಯಬೇಕು ಎಂದು ದಲಿತ ಸಂಘರ್ಷ ಸಮಿತಿ ಮನವಿ ಮಾಡಿಕೊಂಡಿದೆ.

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ  ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯ ಮಂತ್ರಿ ಸಿಧ್ಧರಾಮಯ್ಯ ರವರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿಯವರಿಗೆ ದ.ಸಂ.ಸ.ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕರಾದ  ಸುಂದರ ಮಾಸ್ತರ್ ನೇತೃತ್ವದಲ್ಲಿ ದ.ಸಂ.ಸ. ನಿಯೋಗ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ನಿಯೋಗದಲ್ಲಿ ದ.ಸಂ.ಸ.ಜಿಲ್ಲಾ ಮುಖಂಡರಾದ ಮಂಜುನಾಥ ಗಿಳಿಯಾರು , ಶ್ಯಾಮಸುಂದರ ತೆಕ್ಕಟ್ಟೆ , ಸುರೇಶ ಹಕ್ಲಾಡಿ , ಫ್ರೋಪೇಸರ್ ಫಣಿರಾಜ್ , ಇದ್ರಿಸ್ ಹೂಡೆ , ಕುಮಾರ್ ಕೋಟಾ , ಕೀರ್ತಿ ಪಡುಬಿದ್ರಿ , ಶಿವಾನಂದ ಮೂಡುಬೆಟ್ಟು , ಸುರೇಶ ಬಾರ್ಕೂರು , ವಿಠಲ ತೊಟ್ಟಂ , ಗೋಪಾಲಕೃಷ್ಣ ನಾಡ , ವಿಠಲ ಕೊಡಂಕೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!