ಮಂಗಳೂರು:ನಟಿ ರಾಗಿಣಿ ಮನವಿಗೆ ಸ್ಪಂದನೆ, ಮಂಗಳಮುಖಿಯರ ನೆರವಿಗೆ ನಿಂತ ಪೊಲೀಸ್ ಇಲಾಖೆ
ಮಂಗಳೂರು ಮೇ.28(ಉಡುಪಿ ಟೈಮ್ಸ್ ವರದಿ): ನಟಿ ರಾಗಿಣಿ ದ್ವಿವೇದಿ ಅವರ ಮನವಿಯಂತೆ ನಗರದ ಮಂಗಳಮುಖಿ ಯರ ನೆರವಿಗೆ ಮಂಗಳೂರು ಪೊಲೀಸ್ ಇಲಾಖೆ ಸ್ಪಂದಿಸಿದೆ. ಅದರಂತೆ, ಮಂಗಳೂರಿನಲ್ಲಿ ಸಂಕಷ್ಟದಲ್ಲಿದ್ದ ಮಂಗಳ ಮುಖಿಯರಿಗೆ ಇಂದು ನಗರ ಪೊಲೀಸ್ ಇಲಾಖೆ ವತಿಯಿಂದ 80 ಕ್ಕೂ ಅಧಿಕ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಮಂಗಳಮುಖಿ ಸಮುದಾಯದ ರಾಜ್ಯಾಧ್ಯಕ್ಷೆಯಾಗಿರುವ ಚೈತ್ರ ಅವರು ಸಮಾಜ ಸೇವೆ ಯಲ್ಲಿ ಗುರುತಿಸಿ ಕೊಂಡಿರುವ ನಟಿ ರಾಗಿಣಿ ದ್ವಿವೇದಿ ಅವರ ಬಳಿ ಮಂಗಳೂರಿನ ಲ್ಲಿರುವ ಮಂಗಳಮುಖಿ ಸಮುದಾಯದ ವರಿಗೆ ಬಹಳ ಸಮಸ್ಯೆ ಯಾಗಿದೆ, ಅವರಿಗೆ ಆಹಾರ ಸಾಮಾಗ್ರಿಗಳ ಕಿಟ್ ನ ಅವಶ್ಯಕತೆ ಇದೆ ಎಂದು ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.
ಈ ಬಗ್ಗೆ ನಟಿ ರಾಗಿಣಿ ದ್ವಿವೇದಿ ಅವರು ಮಂಗಳೂರಿನ ಆರ್ ಜೆ ಎರಲ್ ಅವರಿಗೆ ಮಾಹಿತಿ ನೀಡಿ, ಮಂಗಳ ಮುಖಿಯರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಆರ್ ಜೆ ಎರಲ್ ಅವರು ಮಂಗಳೂರಿನ ಕೋವಿಡ್ ಕೋ ಆರ್ಡಿನೇಶನ್ ಗ್ರೂಪ್ ನ ಮುಖ್ಯಸ್ಥ ರಾಗಿರುವ ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.
ಇದಕ್ಕೆ ಕೂಡಲೇ ಸ್ಪಂದಿಸಿದ ಕಮಿಷನರ್ ಅವರು ಪೊಲೀಸ್ ಇಲಾಖೆ ವತಿಯಿಂದಲೇ ನೆರವು ನೀಡುವ ಭರವಸೆ ನೀಡಿದ್ದರು. ಅದರಂತೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿ ಯಲ್ಲಿ ಇಂದು 80 ಕ್ಕೂ ಅಧಿಕ ಆಹಾರ ಸಾಮಾಗ್ರಿಗಳ ಕಿಟ್ ನ್ನು ಮಂಗಳ ಮುಖಿಯರಿಗೆ ವಿತರಿಸಿದ್ದಾರೆ.ಇದೀಗ ಮಂಗಳಮುಖಿ ಯರ ಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಮಂಗಳೂರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ನಟಿ ರಾಗಿಣಿ ಅವರು ಶುಭಕೋರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.