ಮಣಿಪಾಲ್ ಮ್ಯಾರಥಾನ್ 2025- ನೋಂದಣಿ ಪ್ರಕ್ರಿಯೆ ಆರಂಭ

ಮಣಿಪಾಲ ಅ. 23(ಉಡುಪಿ ಟೈಮ್ಸ್ ವರದಿ): ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಫೆ.9 ರಂದು ನಡೆಯಲಿರುವ ಮಣಿಪಾಲ್ ಮ್ಯಾರಥಾನ್‌ನ 7 ನೇ ಆವೃತ್ತಿಯಲ್ಲಿ ಭಾಗವಹಿಸಲು  ನೋಂದಣಿ ಪ್ರಕ್ರೀಯೆ  ಆರಂಭಗೊಂಡಿದೆ.

ಕಳೆದ ವರ್ಷ 15,000 ಕ್ಕೂ ಹೆಚ್ಚು ಜನರು ಭಾಗವಹಿಸುವುದರೊಂದಿಗೆ  ಬೃಹತ್ ಯಶಸ್ಸನ್ನು  ಕಂಡಿತ್ತು. 2025 ರ ಆವೃತ್ತಿಯುಬ”ಇನ್ನೋವೇಶನ್ ಇನ್ ಮೋಷನ್: ಟೆಕ್ನಾಲಜಿ ಫಾರ್ ಹೆಲ್ತ್ ಅಂಡ್ ಫಿಟ್‌ನೆಸ್’ (ಚಲನೆಯಲ್ಲಿ ನಾವೀನ್ಯತೆ: ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು) ಥೀಮ್‌ನ್ನು ಹೊಂದಿದ್ದು 2025 ರ ಫೆ.9 ರಂದು ಬೆಳಗ್ಗೆ 5.00 ಗಂಟೆಗೆ ಮಣಿಪಾಲದ ಕೆಎಂಸಿಯ  ಗ್ರೀನ್ಸ್ ‌ನಲ್ಲಿ ಆರಂಭಗೊಳ್ಳಲಿದೆ. 

ಮಣಿಪಾಲ್ ಮ್ಯಾರಥಾನ್ ನೋಂದಣಿಗೆ [https://manipalmarathon.in/] ಲಿಂಕ್‌ಗೆ ಲಾಗ್‌ಇನ್ ಆಗಬೇಕು.

ಮ್ಯಾರಥಾನ್  ದಿನದ ಮುಖ್ಯಾಂಶಗಳು:

• ಮಣಿಪಾಲ ಮತ್ತು ಉಡುಪಿ ಕರಾವಳಿಯ ಆಕರ್ಷಕ ಭೂದೃಶ್ಯಗಳನ್ನು ಪ್ರದರ್ಶಿಸುವ ಪ್ರಮಾಣೀಕೃತ ಓಟದ ಮಾರ್ಗಗಳು.

• ಐ ಎ ಎ ಎಫ್  ಎ ಐ ಎಂ ಎಸ್ (IAAF AIMS) ನಿಂದ ಅಂತರರಾಷ್ಟ್ರೀಯ ಪ್ರಮಾಣೀಕರಣ, ವಿಶ್ವ ದರ್ಜೆಯ ಓಟದ ಅನುಭವವನ್ನು ಖಾತ್ರಿಪಡಿಸುತ್ತದೆ.

• ಓಟದ ನಂತರದ ಭವ್ಯವಾದ ಕಾರ್ನೀವಲ್ ವಾತಾವರಣ, ಸಮುದಾಯದ ಉತ್ಸಾಹವನ್ನು ಹೆಚ್ಚಿಸುತ್ತದೆ .

• ವಿವಿಧ ವಿಭಾಗಗಳಲ್ಲಿ ಅಗ್ರ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನ ಇರಲಿದೆ

Leave a Reply

Your email address will not be published. Required fields are marked *

error: Content is protected !!