“ಕಾಪು ಪಿಲಿಪರ್ಬ” ಯಶಸ್ವಿ

ಕಾಪು ಅ.12(ಉಡುಪಿ ಟೈಮ್ಸ್ ವರದಿ): ರಕ್ಷಣಾಪುರ ಜವನೆರ್ ಕಾಪು ನೇತೃತ್ವದಲ್ಲಿ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಸಾರಥ್ಯದಲ್ಲಿ‌‌ “ಕಾಪು ಪಿಲಿಪರ್ಬ” ಕಾರ್ಯಕ್ರಮ ಕಾಪು ಬಂಟರ ಭವನದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾಪುವಿನ  ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕ ಕೆ. ಪಿ. ಶ್ರೀನಿವಾಸ್ ತಂತ್ರಿ, ಶಂಕರಪುರ ಚರ್ಚಿನ ಧರ್ಮ ಗುರುಗಳಾದ ರೆವೆರೆಂಡ್ ಫಾದರ್ ಪ್ರಕಾಶ್ ಅನಿಲ್ ಕ್ಯಾಸ್ತಲಿನೋ, ಜಾಮೀಯತುಲ್ ಫಲಾಹ ಕಾಪು ವಲಯ ಅಧ್ಯಕ್ಷರು ಹಾಗೂ ಮುಸ್ಲಿಂ ಒಕ್ಕೂಟದ ಮುಖಂಡರಾದ ಶಬೀ ಅಹ್ಮದ್ ಖಾಝಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹುಲಿ ಕೋಲ ನರ್ತಕ ಗುಡ್ಡ ಪಾನರ ಮತ್ತು ಧರ್ಮದರ್ಶಿ ಸತೀಶ್ ಬಂದಲೆ ಅವರು ಸೇರಿ ಉದ್ಘಾಟಿಸಿದರು.

ಈ ವೇಳೆ ಸಾಹಿತಿ ಟಿ. ಎಸ್. ಹುಸೇನ್ , ರಾಷ್ಟ್ರೀಯ ಮ್ಯಾರಥಾನ್ ಪಟು ಸುಲತಾ ಕಾಮತ್ ಕಟಪಾಡಿ, ಅಂತಾರಾ ಆನಂದ್ ಕೋಟ್ಯಾನ್, ಬಾಲಕೃಷ್ಣ ಟಿ. ಭಂಡಾರಿ, ಜೋಸೆಫ್ ರೆಬೆಲ್ಲೋ, ಸಮಿತಾ ಪೂಜಾರಿ, ರಿದ್ಯಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ  ಅಶೋಕ್ ರಾಜ್ ಕಾಡಬೆಟ್ಟು ತಂಡ, ಕುರ್ಕಾಲ್ ಟೈಗರ್ಸ್, ಬೆಂಗ್ರೆ ಫ್ರೆಂಡ್ಸ್ ಪಡುಬಿದ್ರಿ ಗೆದ್ದುಕೊಂಡಿದ್ದು, ಅತ್ಯುತ್ತಮ ಕರಿ ಹುಲಿ  ಬಹುಮಾನವನ್ನು ಸುಶಾಂತ್, ಅಶೋಕ್ ರಾಜ್ ಕಾಡಬೆಟ್ಟು ತಂಡ. ಅತ್ಯುತ್ತಮ ಹುಲಿ ಕುಣಿತ ಬಹುಮಾನವನ್ನು  ಅಶ್ವಿತ್, ಕೇಸರಿ ಟೈಗರ್ಸ್ ಕುತ್ಯಾರ್ ಅವರು ಪಡೆದುಕೊಂಡಿದ್ದಾರೆ. ಹಾಗೂ ಅಕ್ಕಿಮುಡಿ ಎಸೆದ ಎಲ್ಲಾ ತಂಡದ ಒಬ್ಬ ಸದಸ್ಯರಿಗೆ ನಗದು ಪುರಸ್ಕಾರ ನೀಡಲಾಯಿತು. 

ಈ ಸಂದರ್ಭದಲ್ಲಿ  ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಮಂಜುನಾಥ್ ಭಂಡಾರಿ, ಅಶೋಕ್ ಕುಮಾರ್ ಕೊಡವೂರ್, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್ ರಾಜ್ ಕಾಂಚನ್, ಕಾಪು ದಿವಾಕರ್ ಶೆಟ್ಟಿ, ವಿಕ್ರಂ ಕಾಪು, ನವೀನ್ ಚಂದ್ರ ಜೆ. ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲ್, ಚಂದ್ರಹಾಸ್ ಶೆಟ್ಟಿ ಪುತ್ತೂರು,  ವೈ. ಸುಕುಮಾರ್, ರಮೇಶ್ ಕಾಂಚನ್, ಶಿವಾಜಿ ಸುವರ್ಣ, ಜಿತೇಂದ್ರ ಫುರ್ಟಾಡೊ,  ಶರ್ಫುದ್ದಿನ್ ಶೇಖ್, ದೀಪಕ್ ಎರ್ಮಾಳ್, ರಾಜೇಶ್ ರಾವ್ ಪಾಂಗಾಳ, ನಿರಂಜನ್ ಶೆಟ್ಟಿ, ಸುನಿಲ್ ಡಿ. ಬಂಗೇರ, ದ್ವಿಶನ್ ಸೊರಕೆ, ಹರಿಪ್ರಸಾದ್ ರೈ ಕೊಡಿಮ್ಬಾಡಿ, ವಾಸುದೇವ ಶೆಟ್ಟಿ, ಮನೋಹರ್ ಶೆಟ್ಟಿ, ಗಣನಾಥ ಹೆಗ್ಡೆ, ಮಾಧವ ಪಾಲನ್, ಅಖಿಲೇಶ್ ಕೋಟ್ಯಾನ್, ಲಕ್ಷ್ಮೀಷ ತಂತ್ರಿ, ರಮೀಜ್ ಹುಸೇನ್, ದೇವರಾಜ್ ಕೋಟ್ಯಾನ್, ಸುಧೀರ್ ಕರ್ಕೇರ, ಪ್ರಭಾಕರ್ ಕೈಪುಂಜಾಲ್, ಸತೀಶ್ ಚಂದ್ರ ಮೂಳೂರು, ಗೀತಾ ವಾಗ್ಲೇ, ಶಾಂತಲತ ಶೆಟ್ಟಿ  ಆಶಾ ಅಂಚನ್, ಪ್ರಭಾ ಶೆಟ್ಟಿ, ಜ್ಯೋತಿ ಮೆನನ್, ಸುಚರಿತ ಲಕ್ಷ್ಮಣ್, ಅಶ್ವಿನಿ, ಫರ್ಜನ ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ, ರೇಷ್ಮಾ ಜೂಲಿಯೇಟ್, ಆಶಾ ಶಂಕರ್, ರೀನಾ ಡಿಸೋಜಾ, ಮುಬೀನಾ,  ಸಂಧ್ಯಾ ಬಿ. ಕೋಟ್ಯಾನ್, ಸಿಮ್ಮಿ ಡಿಸೋಜ, ಶೇಖರ್ ಹೆಜಮಾಡಿ, ಅಶೋಕ್ ನಾಯರಿ, ಕಾರ್ತಿಕ್ ಅಮೀನ್, ಪ್ರಭಾಕರ್ ಆಚಾರ್ಯ, ಕಿಶೋರ್ ಎರ್ಮಾಲ್, ಮಹೇಶ್ ಪೂಜಾರಿ, ನಯೀಮ್  ಕಟಪಾಡಿ, ಯಶವಂತ ಪಲಿಮಾರ್, ಬಾಲಕೃಷ್ಣ ಶೆಟ್ಟಿ ಕಾಪು, ಸನವರ್ ಶೇಖ್, ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು  ಚಲನಚಿತ್ರದ ನಾಯಕ ವಿ. ಜೆ. ವಿನೀತ್ , ನಾಯಕಿ ಸಮತಾ ಅಮೀನ್,  ನಿರ್ದೇಶಕ  ರಾಹುಲ್ ಅಮೀನ್, ಮತ್ತಿತರ ಪ್ರಮುಖರು ಹಾಗೂ ರಕ್ಷಣಾಪುರ ಜವನೆರ್ ತಂಡದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!