ಬ್ರಹ್ಮಾವರ: ಕೋಳಿ ಅಂಕಕ್ಕೆ ದಾಳಿ- ಮೂವರು ವಶ

ಬ್ರಹ್ಮಾವರ ಅ.09(ಉಡುಪಿ ಟೈಮ್ಸ್ ವರದಿ): ಹಾವಂಜೆ ಗ್ರಾಮದ ಬೆಳ್ಮಾರು ರಸ್ತೆಯ ಅರ್.ಜೆ. ಕಾಂಪ್ಲೆಕ್ಸ್ ಹಿಂಭಾಗದ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಗುರುಪ್ರಸಾದ್, ವಿಜಯ, ಗಣೇಶ್ ಎಂಬ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ದಾಳಿ ವೇಳೆ ಹಲವು ಮಂದಿ ಪರಾರಿಯಾಗಿದ್ದಾರೆ.

ಈ ವೇಳೆ ಪೊಲೀಸರು ಜುಗಾರಿ ಆಟಕ್ಕೆ ಬಳಸಿದ್ದ ಸ್ಥಳದಲ್ಲಿದ್ದ 2 ಕೋಳಿಗಳನ್ನು, 5 ದ್ವಿಚಕ್ರ ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!