ಉಡುಪಿ: ಅ.10 ರಂದು ಲೊಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ಪತ್ರೆಯ ನವೀಕೃತ ರೆಸ್ಟೋರೆಂಟ್‌ ಉದ್ಘಾಟನೆ

ಉಡುಪಿ ಆ.08(ಉಡುಪಿ ಟೈಮ್ಸ್ ವರದಿ): ಲೊಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ಪತ್ರೆಯ ನವೀಕೃತ ರೆಸ್ಟೋರೆಂಟ್‌ನ ಉದ್ಘಾಟನಾ ಸಮಾರಂಭ ಅ.10 ರಂದು ಬೆಳಿಗ್ಗೆ 11.00 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ನೂತನ ಕ್ಯಾಂಟೀನ್‌ನ್ನು ಉದ್ಘಾಟಿಸಲಿದ್ದಾರೆ. ಬಿಷಪ್ ವಂ.ರೆ.ಫಾ. ಹೇಮಚಂದ್ರ ಕುಮಾರ್ ಅವರು ಆಶಿರ್ವಚನ ನೀಡಲಿದ್ದಾರೆ. ಬಡಗಬೆಟ್ಟು ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೈಲೂರು ವಾರ್ಡ್‌ನ ನಗರಸಭಾ ಸದಸ್ಯ ರಮೇಶ್ ಕಾಂಚನ್, ಸಿಎಸ್‌ಐ ಕೆಎಸ್‌ಡಿ ಇದರ ಏರಿಯಾ ಚೇರ್ಮೆನ್ ರೆ. ಐವನ್ ಡಿಸೋಜ ಅವರು ಭಾಗವಹಿಸಲಿದ್ದಾರೆ‌‌ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಶೀಲ್ ಜತ್ತನ್ನಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!