ಉಡುಪಿ- ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ ಅ.07(ಉಡುಪಿ ಟೈಮ್ಸ್ ವರದಿ): ಆದರ್ಶ ಆಸ್ಪತ್ರೆ ಸೂಪರ್ ಸ್ಪೆಶಾಲಿಟಿ ಸೆಂಟರ್, ವಂಡ್ಸೆ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆ, ನಮ್ಮ ಪರಸ್ಪರ ಆಸರೆ ಸೊಸೈಟಿ, ನಮ್ಮ ಭೂಮಿ ಸಿ.ಡಬ್ಲ್ಯೂ.ಸಿ. ಸಂಸ್ಥೆ, ಕನ್ಯಾನ ಇವರ ಜಂಟಿ ಆಶ್ರಯದಲ್ಲಿ ಶಾಲಾ ಅಭಿವೃದ್ಧಿ ಸಮಿತಿ, ಸ.ಹಿ.ಪ್ರಾ.ಶಾಲೆ ವಂಡ್ಸೆ, ವಿಜಯ ಮಕ್ಕಳ ಕೂಟ ಆತ್ರಾಡಿ ವಂಡ್ಸೆ, ಮಾತೃಭೂಮಿ ಯುವ ಸಂಘಟನೆ ಆತ್ರಾಡಿ, ಆಶೀರ್ವಾದ ಫ್ರೆಂಡ್ಸ್, ಯಕ್ಷಿ ಅನ್ನಪೂರ್ಣೇಶ್ವರಿ ಯುವ ಸಂಘಟನೆ, ಮೇಲ್‌ಪೇಟೆ ಫ್ರೆಂಡ್ಸ್, ಬೃಂದಾವನ ಸಂಜೀವಿನಿ ಸಂಘ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಸಹಕಾರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ವಂಡ್ಸೆಯ ಸ.ಹಿ.ಪ್ರಾ ಶಾಲೆಯಲ್ಲಿ ನಡೆಯಿತು.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಜನರಲ್ ಮೆಡಿಸಿನ್ / ಪ್ರಸೂತಿ ಮತ್ತು ಸ್ತ್ರೀರೋಗ / ಚರ್ಮರೋಗ/ ಕಣ್ಣಿನ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿಯನ್ನು ನೀಡಲಾಯಿತು. ರಕ್ತದ ಸಕ್ಕರೆ ಅಂಶ, ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.