ಮಂಗಳೂರು : ಗಿರಿಜಾ ಹೆಲ್ತ್ ಕೇರ್‌ನ ನೂತನ ಶಾಖೆ ಶುಭಾರಂಭ

ಮಂಗಳೂರು ಅ.07 ( ಉಡುಪಿ ಟೈಮ್ಸ್ ವರದಿ): ವೈದ್ಯಕೀಯ ಸಲಕರಣೆಗಳ ಪ್ರಸಿದ್ಧ ಮಳಿಗೆ ಗಿರೀಜಾ ಹೆಲ್ತ್ ಕೇರ್‌ನ 2 ನೇ ಶಾಖೆ ಮಂಗಳೂರಿನ ಸಾನು ಪ್ಯಾಲೆಸ್‌ನಲ್ಲಿ ಶುಭಾರಂಭಗೊಂಡಿದೆ.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಿರಿಜಾ ಹೆಲ್ತ್ ಕೇರ್‌ನ ಸೌಲಭ್ಯಗಳ ಸದುಪಯೋಗ ಪಡುದುಕೊಳ್ಳುವಂತಾಗಲಿ ಎಂದು ಸಂಸ್ಥೆಯ ಯಶಸ್ಸಿಗಾಗಿ ಶುಭ ಹಾರೈಸಿದರು. 

ಈ ವೇಳೆ ಗಿರಿಜಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರವೀಂದ್ರ ಕೆ ಶೆಟ್ಟಿ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಗಿರಿಜಾ ಹೆಲ್ತ್ ಕೇರ್‌ನ ಶಾಖೆಯನ್ನು ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ವಿಸ್ತರಿಸಿ ಸೇವೆ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ತುಳು ಹಾಸ್ಯ ನಟ ಅರವಿಂದ ಬೋಳಾರ್, ಡೈಜಿ ವರ್ಲ್ಡ್ ಮಾಧ್ಯಮದ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಬಿಜೆಪಿ ವಕ್ತಾರ ರಾಜ್ ಗೋಪಾಲ್ ರೈ, ನಮ್ಮ ಕುಡ್ಲ ಸಂಸ್ಥಾಪಕ ಲೀಲಾಕ್ಷ ಕರ್ಕೇರಾ, ಮಂಗಳೂರು ಮನಪಾ ಸದಸ್ಯೆ ಲೀಲಾವತಿ ಪ್ರಕಾಶ್, ಸಾನು ಪ್ಯಾಲೆಸ್‌ನ ಮಾಲಕ ಗುರು  , ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್  ನ ಪಾಲುದಾರರಾದ ಸುರೇಖ ಶೆಟ್ಟಿ, ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!