ಉಡುಪಿ: ಅ.5-6-ಎಸ್‌ಬಿಐ ಗೃಹ- ಕಾರು ಸಾಲ ಹಬ್ಬ

ಉಡುಪಿ ಅ.1(ಉಡುಪಿ ಟೈಮ್ಸ್ ವರದಿ): ಎಸ್‌ಬಿಐಯ ವತಿಯಿಂದ ಅ.5 ಮತ್ತು 6 ರಂದು ಬೆಳಿಗ್ಗೆ 10.00 ಗಂಟೆಯಿಂದ ಗೃಹ ಮತ್ತು ಕಾರು ಸಾಲ ಹಬ್ಬವನ್ನು ಪುರಭವನದಲ್ಲಿ ಆಯೋಜಿಸಲಾಗಿದೆ.

ಈ ಸಾಲ ಹಬ್ಬದಲ್ಲಿ ಸ್ಪಾಟ್ ಬುಕ್ಕಿಂಗ್ ಮೇಲೆ ವಿಷೇಷ ರಿಯಾಯಿತಿ ಬಡ್ಡಿ ದರ ಸಿಗಲಿದೆ. ಕಾರ್ ಲೋನ್‌ನಲ್ಲಿ ಆಕರ್ಷಕ ಬಡ್ಡಿ ದರ, ಪ್ರತೀ ಗಂಟೆಗೆ ಲಕ್ಕಿ ಡ್ರಾಗಳಲ್ಲಿ ವಿಶೇಷ ಬಹುಮಾನಗಳು ಇರಲಿದೆ. ಹಾಗೂ ಗೃಹ ಸಾಲದ ಮೇಲೆ ವಿಶೇಷ ಕೊಡುಗೆಗಳು ಲಭ್ಯವಿದ್ದು, ಮಹಿಳಾ ಉದ್ಯೋಗಿಗಳಿಗೆ ವಿಷೇಷ ಕೊಡುಗೆ, ಶೂನ್ಯ ಸಂಸ್ಕರಣಾ ಶುಲ್ಕ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ. ಸೋಲಾರ್ ರೂಫ್ ಟಾಪ್ ಗೆ ಹಣಕಾಸಿನ ನೆರವು,12 ಕ್ಕೂ ಅಧಿಕ ಅನುಮೋದಿತ ಯೋಜನೆಗಳು ಇರಲಿದೆ.

ಜೊತೆಗೆ ಈ ನವರಾತ್ರಿಗೆ ಉಡುಪಿಯ ಪ್ರತಿಷ್ಠಿತ ಬಿಲ್ಡರ್ಸ್‌ಗಳ ಜೊತೆಗೆ ಸಂವಾದ ನಡೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8197164889 ನ್ನು ಸಂಪರ್ಕಿಸಬಹುದು ಅಥವಾ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!