ಯು.ಎ.ಇ.ಜೂನಿಯರ್ ಐಡೊಲ್ ಸ್ಟಾರ್‌ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ ಸೆ.30(ಉಡುಪಿ ಟೈಮ್ಸ್ ವರದಿ): ಯು.ಎ. ಇ.ಮಲ್ಟಿ ಸ್ಟಾರ್‌ ಸಂಘಟಿಸಿದ ಬಹು ಪ್ರತಿಷ್ಠಿತ ಯುಎಇ ಐಡೋಲ್  24″ಜೂನಿಯರ್ ವಿಭಾಗದ ಸ್ಪರ್ಧೆ  ದುಬೈಯ ಸ್ವಿಸ್ ಇಂಟರ್‌ನ್ಯಾಷನಲ್ ಸ್ಕೂಲ್‌ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಖ್ಯಾತ ನಟ ಸಂಗೀತ ನಿರ್ದೇಶಕ ಸಾಧುಕೋಕಿಲ, ಪ್ರಸಿದ್ಧ ಹಿನ್ನೆಲೆ ಗಾಯಕಿ ಅನುರಾಧ ಭಟ್, ನಟ ರಾಪರ್ ಚಂದನ್ ಶೆಟ್ಟಿ ಭಾಗವಹಿಸಿದರು.

ಯು.ಎ.ಇ.ಜೂನಿಯರ್ ಐಡೊಲ್ ಸಂಗೀತ ಸ್ಪರ್ಧಾ ಕೂಟ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ನಡೆಯಿತು. ಜೂನಿಯರ್ ವಿಭಾಗದಲ್ಲಿ ಸನ್ನಿಧಿ ಶೆಟ್ಟಿಯವರು ಚಾಂಪಿಯನ್ ಆಗಿ ಮೂಡಿ ಬರುವುದರ ಮೂಲಕ  ಯು.ಎ.ಇ. ಜೂನಿಯರ್ ಐಡೊಲ್  24 ಪ್ರಶಸ್ತಿ ಮೂಡಿಗೇರಿಸಿಕೊಂಡರು. ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಮಹದ್ವಿನ್ ಕೌಶಿಕ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯು.ಎ.ಇ.ಕನ್ನಡ ಸಂಘದ ಅಧ್ಯಕ್ಷ ಪರೀಕ ಸರ್ವೋತ್ತಮ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಮಲ್ಟಿ ಸ್ಟಾರ್ ಸಂಘಟನೆಯ ಪ್ರಮುಖರಾದ ಮಮತಾ ಮತ್ತು ಸಿಂಥಿಲ್ ಉಪಸ್ಥಿತರಿದ್ದರು. ಸಂಗೀತ ಕಾರ್ಯಕ್ರಮದ ಪ್ರಧಾನ ನಿರೂಪಣೆಯನ್ನು ಖ್ಯಾತ ನಿರೂಪಕಿ ಅನುಪಮ ಭಟ್ ನಿವ೯ಹಿಸಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಆರತಿ ಅಡಿಗ ಅವರು ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!