ಉಡುಪಿ: ಉಚಿತ ಆರೋಗ್ಯ ಮತ್ತು ಹೃದ್ರೋಗ ತಪಾಸಣೆ, ಮಾಹಿತಿ ಶಿಬಿರ
ಉಡುಪಿ ಸೆ.28(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ.ಉಡುಪಿ, ಜಿಲ್ಲಾ ಆಸ್ಪತ್ರೆ ಉಡುಪಿ ಎನ್.ಸಿ.ಡಿ ವಿಭಾಗ, ದಂತ ವೈದಕೀಯ ವಿಭಾಗ ಮಣಿಪಾಲ, ಪ್ರಸಾದ್ ನೇತ್ರಲಾಯ ಉಡುಪಿ, ಸೋಯಜ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ಮತ್ತು ಹೃದ್ರೋಗ ತಪಾಸಣಾ ಹಾಗೂ ಮಾಹಿತಿ ಶಿಬಿರ ದೊಡಣ್ಣಗುಡ್ಡೆ ಜನತಾ ವ್ಯಾಯಾಮ ಶಾಲೆ ಒಳಾಗಣ ಕ್ರೀಡಾಂಗಣದಲ್ಲಿ ನಡೆಯಿತು.
ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯ ಡಾ ಪ್ರಶಾಂತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಎಚ್ ಅಶೋಕ್ ಈ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದರು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ ನಾಗರತ್ನ ಇವರು ಶಿಬಿರಕ್ಕೆ ಮಾರ್ಗದರ್ಶನ ನೀಡಿದರು.
ಎನ್.ಸಿ.ಡಿ ಯ ಆಪ್ತ ಸಮಾಲೋಚಕ ಮನು ಎಸ್.ಬಿ ಅಸಾಂಕ್ರಾಮಿಕ ರೋಗಗಳು ಬಗ್ಗೆ ಆಪ್ತ ಸಮಾಲೋಚನೆ ನಿಡೀದರು. ಸುಮಾರು 137 ಜನರು ಈ ಶಿಬಿದರ ಉಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಸ್ಪತ್ರೆಯ ಎನ್ ಸಿ ಡಿ ವೈದ್ಯಾದಿಕಾರಿ ಡಾ. ಕುಸುಮ, ಆದರ್ಶ ಆಸ್ಪತ್ರೆಯ ಡಾ. ಸ್ವಿಟೀಲಿನ್, ಕೆಎಂಸಿ ದಂತ ವೈದ್ಯಕೀಯ ವಿಭಾಗದ ಡಾ ಫೇ, ಪ್ರಸಾದ್ ನೇತ್ರಾಲಯದ ಡಾ. ಡಾ .ಸ್ನೇಹ ಉಪಸ್ಥಿತರಿದ್ದರು.