ಮಾಂಡವಿ ಅಕ್ರೋಪೊಲಿಸ್ ಅಪಾರ್ಟ್ಮೆಂಟ್ ಓನರ್ಸ್ ಕೋ-ಆ. ಸೊಸೈಟಿ- ವಾರ್ಷಿಕ ಮಹಾಸಭೆ
ಉಡುಪಿ. ಸೆ.27, ಮಾಂಡವಿ ಅಕ್ರೋಪೊಲಿಸ್ ಅಪಾರ್ಟ್ಮೆಂಟ್ ಓನರ್ಸ್ ಕೋ-ಆಪರೇಟಿವ್ ಸೊಸೈಟಿ ಉಡುಪಿ, ಇದರ 2023-24ನೇ ಸಾಲಿನ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾಸಭೆಯು ಮಾಂಡವಿ ಅಕ್ರೋಪೊಲಿಸ್ ವಸತಿ ಸಮುಚ್ಚಯದ “ಸಿ” ಟವರ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಸುಕುಮಾರ್ ಶೆಟ್ಟಿಯವರು ಮಾತನಾಡಿ, ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ’ ಎಂಬ ತತ್ವಗಳ ಆಧಾರದ ಮೇಲೆ ಪ್ರಾರಂಭಗೊಂಡು ಶತಮಾನಗಳ ಭವ್ಯ ಇತಿಹಾಸ ಇರುವ ಸಹಕಾರ ಕ್ಷೇತ್ರದಲ್ಲಿ, ನಮ್ಮ ಮಾಂಡವಿ ಅಕ್ರೋಪೊಲಿಸ್ ಅಪಾರ್ಟ್ಮೆಂಟ್ ಓನರ್ಸ್ ಕೋ-ಅಪರೇಟಿವ್ ಸೊಸೈಟಿ ನೋಂದಣಿಗೊಂಡು, ವರದಿ ವರ್ಷಕ್ಕೆ ಮೂರು ತಿಂಗಳು ಕಳೆದವು. ಸಂಸ್ಥೆ ಇನ್ನೂ ಚೊಚ್ಚಲ ಹಸಿಗೂಸು. ನಾವು ಕಠಿಣ ಪರಿಶ್ರಮದ ತತ್ವಗಳನ್ನು ನಂಬುತ್ತೇವೆ, ಗುಣಮಟ್ಟ, ಸುರಕ್ಷತೆ, ಭದ್ರತೆ ಮತ್ತು ಪರಿಸರದಲ್ಲಿ ಉನ್ನತ ಗುಣಮಟ್ಟಕ್ಕೆ ಬದ್ಧರಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಹಾಗೂ ಆಡಳಿತ ಮಂಡಳಿ ಮತ್ತು ಸದಸ್ಯರೆಲ್ಲರ ಸಹಕಾರದಿಂದ ನಾವು ನಮ್ಮ ಸಂಸ್ಥೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾದ್ಯವಿದೆ ಎಂಬ ನಂಬಿಕೆಯನ್ನು ಹೊಂದಿದ್ದೇನೆ. ಸದಸ್ಯರ ವಿಶ್ವಾಸಾರ್ಹತೆ, ಭದ್ರತೆ ಮತ್ತು ಆರ್ಥಿಕತೆಯ ತತ್ವಗಳು, ನಿವಾಸಿಗಳ ಸ್ವಚ್ಛ, ಸುರಕ್ಷಿತ, ಆರೋಗ್ಯಕರ ಪರಿಸರದ ಹೆಚ್ಚುತ್ತಿರುವ ನಿರೀಕ್ಷೆಯೊಂದಿಗೆ ಹೊಂದಿಕೆಯಾಗುವಂತೆ ಮುಂದಿನ ಹೆಜ್ಜೆ ಇಟ್ಟು, ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಮಹತ್ತರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ, ಅದೆಲ್ಲವೂ ಪಾಲುದಾರ ಸದಸ್ಯರೆಲ್ಲರ ಸಹಾಯ ಸಹಕಾರದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸೊಸೈಟಿಯ ನಿರ್ದೇಶಕ ಕೆ. ಸತೀಶ್ ಹೆಗ್ಡೆ, ಸೊಸೈಟಿಯ ಉಪಾಧ್ಯಕ್ಷೆ ಸುಮಿತ ಪಿರೇರ, ಹಾಗೂ ನಿರ್ದೇಶಕರುಗಳಾದ ಕೆ. ಸತೀಶ್ ಹೆಗ್ಡೆ, ಫಿಲಿಫ್ ಡಿಸೋಜ, ಅಲೆಕ್ಸಾಂಡರ್ ನೊರೊನ್ಹಾ, ಜ್ಯೋತಿ ಅರ್. ಶೆಟ್ಟಿ , ಮೊಹಮ್ಮದ್ ಹುಸೇನ್, ಅಸ್ಸಿಲ್ಲಾ ಕ್ರಾಸ್ತಾ, ಸಲಹೆಗಾರರಾದ ಫ್ರಾನ್ಸಿಸ್ ಡಿಸೋಜ ಉಪಸ್ಥಿತರಿದ್ದರು.