ಪಡುಬಿದ್ರೆ: ನ.16-18- ಕಡಲ್ ಫಿಶ್ ಟ್ರೋಫಿ-2024 ಕ್ರಿಕೆಟ್ ಪಂದ್ಯಾಕೂಟ

ಪಡುಬಿದ್ರೆ ಸೆ.28:  ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ಇದರ ಆಶ್ರಯದಲ್ಲಿ ಕಡಲ್ ಫಿಶ್ ಟ್ರೋಫಿ-2024 ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟವು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನ.16, 17 ಮತ್ತು 18ರಂದು ನಡೆಯಲಿದೆ ಎಂದು ಸಂಘಟಕ ಚೇತನ್ ಪಡುಬಿದ್ರಿ ಅವರು ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ಈ ಪಂದ್ಯಾಕೂಟದಲ್ಲಿ ಭಾಗವಹಿಸಲು ಮಧ್ಯಪ್ರದೇಶ, ಛತ್ತಿಸ್‌ಘಡ್ ಮತ್ತಿತರರ ರಾಜ್ಯಗಳ ತಂಡಗಳು ಸಂಪರ್ಕಿಸಿದ್ದು, ಒಟ್ಟು 22 ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಲಿವೆ. ಪಂದ್ಯಾಕೂಟದ ಪ್ರಥಮ ಸ್ಥಾನಿ ತಂಡಕ್ಕೆ 5 ಲಕ್ಷ ರೂಪಾಯಿ ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನಿ ತಂಡಕ್ಕೆ 3 ಲಕ್ಷ ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು. ಪಂದ್ಯ ಶ್ರೇಷ್ಠ, ಸರಣಿಶ್ರೇಷ್ಠ, ಉತ್ತಮ ಎಸೆತಗಾರ ಮತ್ತು ಉತ್ತಮ ದಾಂಡಿಗ ಸಹಿತ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ಮಂಗಳೂರು ಮತ್ತು ಉಡುಪಿ ತಂಡಗಳಿಗೆ ಗ್ರಾಮವಾರು ಪಂದ್ಯ ನಡೆಯಲಿದ್ದು,  ಆಧಾರ್ ಕಾರ್ಡ್ ಮತ್ತು ಪಿನ್‌ಕೋಡ್ ಕಡ್ಡಾಯವಾಗಿದೆ. ಪಂದ್ಯಾಕೂಟದಲ್ಲಿ ಉಳಿಕೆಯಾದ ಮೊತ್ತವನ್ನು ಅಶಕ್ತರಿಗೆ ನೀಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಸಂಘಟಕರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅವರು ಮಾತನಾಡಿ, ಟೆನಿಸ್‌ ಬಾಲ್‌ನಲ್ಲಿ ರಾಜ್ಯದಲ್ಲಿಯೇ ಪಡುಬಿದ್ರಿಯಲ್ಲಿ ಮೊತ್ತಮೊದಲ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟವನ್ನು ಪಡುಬಿದ್ರಿ ಬೋರ್ಡು ಶಾಲಾ ಮೈದಾನದಲ್ಲಿ ನಡೆಸುವ ಮೂಲಕ ರಾಜ್ಯದಲ್ಲಿ ಗಮನಸೆಳೆದಿತ್ತು. ಆ ಬಳಿಕ ಹಲವಾರು ಕ್ರಿಕೆಟ್ ಪಂದ್ಯಾಟಕೂಟದಲ್ಲಿ ಯಶಸ್ವಿಯಾಗಿ ನಡೆದಿದೆ. ಇದೀಗ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿಅಶೋಕ್ ಸಾಲ್ಯಾನ್, ಪಾಂಡು ಕರ್ಕೇರ, ಪ್ರಶಾಂತ್, ಕೃಷ್ಣ ಬಂಗೇರ, ವಸಂತ್, ಕರುಣಾಕರ ಪೂಜಾರಿ, ರಮೀಜ್ ಹುಸೇನ್, ಸುಭಾಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!